ಬುಧವಾರ, ನವೆಂಬರ್ 13, 2019
23 °C

ಪ್ರಭಾಸ್ ಬೇರೆಯವರಿಗೂ ಚೆನ್ನಾಗಿ ತಿನ್ನಿಸ್ತಾರೆ: ಪೂಜಾ ಹೆಗ್ಡೆ

Published:
Updated:

ನಟಿ ಪೂಜಾ ಹೆಗ್ಡೆ ಟಾಲಿವುಡ್‌ನಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದವರು. ಸದ್ಯ ತಮ್ಮ ಹೊಸ ಸಿನಿಮಾಗಳಾದ ಫ್ಲಿಕ್ ಮತ್ತು ಹೌಸ್‌ಪುಲ್‌ 4 ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿರುವ ಅವರು, ಪ್ರಚಾರ ಸಂದರ್ಭದಲ್ಲಿ ಸಹನಟ ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ.

‘ಪ್ರಭಾಸ್ ಅವರು ಯಾವಗಲೂ ಉತ್ಸಾಹದಿಂದ ಇರುತ್ತಾರೆ. ಅವರು ಚೆನ್ನಾಗಿ ತಿನ್ನುವುದರಲ್ಲಿ ಮಾತ್ರವಲ್ಲ ಇತರರಿಗೂ ಚೆನ್ನಾಗಿ ತಿನ್ನಿಸುತ್ತಾರೆ. ಪ್ರಭಾಸ್‌ ಅವರ ಬಾಣಸಿಗರು, ಬಾಯಲ್ಲಿ ನೀರೂರಿಸುವಂತಹ ಖಾದ್ಯಗಳನ್ನು ಸೆಟ್‌ಗೆ ತರುತ್ತಾರೆ’ ಎಂದು ಹೇಳಿಕೊಂಡಿದ್ದಾರೆ.

ರಾಧ ಕೃಷ್ಣ ನಿರ್ದೇಶನದ ಫ್ಲಿಕ್ ಹಾಗೂ ಜಾನ್‌ ಸಿನಿಮಾಗಳಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ ಎಂಬ ಗಾಳಿಸುದ್ದಿ ಇದೆ. ಆದರೆ, ಲಂಡನ್‌ಗೆ ತೆರಳಿರುವ ಪ್ರಭಾಸ್‌ ವಾಪಸ್‌ ಬಂದ ಬಳಿಕವೇ ಪೂರ್ಣ ಪ್ರಮಾಣದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಜಾನ್‌ ಸಿನಿಮಾ ರೊಮ್ಯಾಂಟಿಕ್‌ ಪ್ರೇಮಕಥಾ ಹಂದರವನ್ನು ಹೊಂದಿದೆ ಎನ್ನಲಾಗುತ್ತಿದ್ದು, ಬಹುತೇಕ ಚಿತ್ರೀಕರಣ ಯುರೋಪ್‌ನಲ್ಲಿ ನಡೆಯಲಿದೆ. ಇದರಲ್ಲಿ ಪ್ರಭಾಸ್, ಜ್ಯೋತಿಷಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)