ಮನುರಂಜನ್ ರವಿಚಂದ್ರನ್ – ಕೀರ್ತಿ ಕಲ್ಕೇರಿ: ಚಿತ್ರಮಂದಿರಗಳಲ್ಲಿ ‘ಪ್ರಾರಂಭ’

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ರವಿಚಂದ್ರನ್ – ಕೀರ್ತಿ ಕಲ್ಕೇರಿ ಅಭಿನಯದ ‘ಪ್ರಾರಂಭ’ ಚಿತ್ರ ಮೇ 20ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
‘ಮೂರು ವರ್ಷಗಳ ಹಿಂದೆ ‘ಪ್ರಾರಂಭ’ ನಿರ್ಮಾಣ ಶುರುವಾಗಿತ್ತು. ಎರಡು ವರ್ಷ ಕೋವಿಡ್ ನಿಂದ ವಿಳಂಬವಾಯಿತು. ಈಗ ಬಿಡುಗಡೆಯಾಗುತ್ತಿದೆ. ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ’ ಎಂದರು ನಿರ್ದೇಶಕ ಮನು ಕಲ್ಯಾಡಿ.
‘ಇದು ನನ್ನ ಅಭಿನಯದ ನಾಲ್ಕನೇ ಚಿತ್ರ. ಪ್ರೀತಿ ಕೈ ಕೊಟ್ಟರೆ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ. ಆದರೆ ಅದು ತಪ್ಪು. ನಮಗೂ ಕುಟುಂಬ ಇರುತ್ತದೆ ಎಂಬುದನ್ನು ಯೋಚಿಸಿ ಮುನ್ನಡೆಯಬೇಕು. ಇಂತಹ ಕಥೆ ‘ಪ್ರಾರಂಭ’ ದಲ್ಲಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನೋಡಿ ಹರಸಿ’ ಎಂದರು ನಾಯಕ ಮನುರಂಜನ್ ರವಿಚಂದ್ರನ್.
ನನ್ನ ಪಾತ್ರ ಚೆನ್ನಾಗಿದೆ. ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವುದಾಗಿ ನಾಯಕಿ ಕೀರ್ತಿ ಕಲ್ಕೇರಿ ಹೇಳಿದರು. ವೆಂಕಟ್ ಈ ಚಿತ್ರ ವಿತರಿಸುತ್ತಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣವಿದೆ. ಜಗದೀಶ್ ಕಲ್ಯಾಡಿ ಈ ಚಿತ್ರದ ನಿರ್ಮಾಪಕರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.