ಶುಕ್ರವಾರ, ಮಾರ್ಚ್ 31, 2023
22 °C

ಪ್ರಶಾಂತ್ ಸರ್‌, ನೀವು ಭಾರತೀಯ ಚಿತ್ರರಂಗದ ವೀರಪ್ಪನ್‌! -ರಾಮ್‌ ಗೋಪಾಲ್‌ ವರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಶಾಂತ್ ನೀಲ್‌ ಸರ್‌, ನೀವು ಭಾರತೀಯ ಚಿತ್ರರಂಗದ ವೀರಪ್ಪನ್‌ ಇದ್ದಂತೆ! ಹೀಗೆ ಹೇಳಿದವರು ಟಾಲಿವುಡ್‌ನ ವಿವಾದಿತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ.

ಕೆಜಿಎಫ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರಿಗೆ ‘ನಿರ್ದೇಶಕರ ದಿನಾಚರಣೆ‘(ಮೇ 4)ಯ ಶುಭಾಶಯಗಳನ್ನು ಹೇಳಿರುವ ವರ್ಮಾ, ಭಾರತೀಯ ಚಿತ್ರರಂಗ ಹಾಗೂ ಸಿನಿಮಾ ಕಲೆಕ್ಷನ್‌ ಕುರಿತಂತೆ ಟ್ವೀಟ್‌ ಮಾಡಿದ್ದಾರೆ.

ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌, ಮಾಲಿವುಡ್‌ ನಿರ್ದೇಶಕರುಗಳ ತಲೆ ಕೆಡಿಸಿದ್ದಕ್ಕೆ ನಾನು ನಿಮಗೆ ಅನ್‌ಹ್ಯಾಪಿ ನಿರ್ದೇಶಕರ ದಿನಾಚರಣೆ ಹೇಳುತ್ತಿದ್ದೇನೆ. ನಿಮ್ಮಿಂದ ಭಾರತೀಯ ಸಿನಿಮಾರಂಗಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ ಎಂದು ವರ್ಮಾ ಹೇಳಿದ್ದಾರೆ

ಪ್ರಶಾಂತ್‌ ಅವರೇ , ನೀವು ಕ್ವಿಂಟಾಲ್‌ ಗಟ್ಟಲೆ ಹಣ ಮಾಡಿದ್ದೀರಾ, ಆದರೆ ಭಾರತೀಯ ಸಿನಿಮಾರಂಗಕ್ಕೆ ಟನ್‌ ಗಟ್ಟಲೆ ಹಣ ನಷ್ಟವಾಗಿದೆ. ಅವರು ಹೊಸ ಆಲೋಚನೆಗೆ, ಡ್ರಾಪ್ಟ್‌ಗೆ, ಮರು ಶೂಟಿಂಗ್‌ಗೆ ಮತ್ತಷ್ಟು ಹಣ ಸುರಿಯಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.

ವರ್ಮಾ ತಮ್ಮ ಟ್ವೀಟ್‌ಗಳ ಮೂಲಕ ಪ್ರಶಾಂತ್‌ ನೀಲ್‌ ಅವರನ್ನು ಹೊಗಳಿದಂತೆಯೂ, ತೆಗಳದಂತೆಯೂ ತಮ್ಮದೇ ಶೈಲಿಯಲ್ಲಿ ವಿಡಂಬನಾತ್ಮಕವಾಗಿ ಟ್ವೀಟ್‌ ಮಾಡಿದ್ದಾರೆ.

ವರ್ಮಾ ಅವರ ಟ್ವೀಟ್‌ಗಳಿಗೆ ಪ್ರಶಾಂತ್‌ ನೀಲ್‌ ಅವರು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು. 

ಇದನ್ನೂ ಓದಿ: ದಂಗಲ್ ದಾಖಲೆ ಉಡೀಸ್ ಮಾಡಿದ ಯಶ್: ಹಿಂದಿಯಲ್ಲಿ ಹೆಚ್ಚು ಹಣ ಗಳಿಸಿದ 2ನೇ ಚಿತ್ರ KGF

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌2 ಸಿನಿಮಾ ಗಳಿಕೆಯಲ್ಲಿ ಮುನ್ನುಗುತ್ತಿದೆ. ಈಗಾಗಲೇ ಸಿನಿಮಾ ₹1000 ಕೋಟಿ ಕ್ಲಬ್‌ ಸೇರಿದೆ.

ಇದನ್ನೂ ಓದಿನೆಲ್ಸನ್ ನಿರ್ದೇಶನದ ಹೊಸ ಚಿತ್ರದಲ್ಲಿ ರಜನಿಕಾಂತ್ –ಶಿವರಾಜ್‌ಕುಮಾರ್‌ ನಟನೆ?  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು