ಮಂಗಳವಾರ, ನವೆಂಬರ್ 19, 2019
21 °C

ಆ ನಟನಿಗಾಗಿಯೇ 'ಉಗ್ರಂ 2' ಮಾಡುತ್ತೇನೆ: ಆಸೆ ಬಿಚ್ಚಿಟ್ಟ ಪ್ರಶಾಂತ್‌ ನೀಲ್‌

Published:
Updated:

ಬೆಂಗಳೂರು: ನಟ ಶ್ರೀಮುರಳಿ ಅವರಿಗಾಗಿ ‘ಉಗ್ರಂ 2’ ಸಿನಿಮಾ ನಿರ್ದೇಶಿಸುತ್ತೇನೆ ಎಂದು ಪ್ರಶಾಂತ್‌ ನೀಲ್ ತಿಳಿಸಿದರು. 

ತಮ್ಮ ಸಿನಿಮಾ ಪಯಣದ ಬಗ್ಗೆ ‘ಸಿನಿಮಾ ಪುರವಣಿ’ಯೊಂದಿಗೆ ಅವರು ಮಾತನಾಡಿದ್ದಾರೆ.

ಸದ್ಯ ‘ಕೆಜಿಎಫ್‌ ಚಾಪ್ಟರ್ 2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಚಿತ್ರ ಮುಗಿದ ಬಳಿಕ ‘ಉಗ್ರಂ 2’  ನಿರ್ದೇಶಿಸುತ್ತೇನೆಯೇ ಎಂಬುದು ನನಗಂತೂ ಗೊತ್ತಿಲ್ಲ. ಆದರೆ, ಅವರಿಗಾಗಿ ಆ ಸಿನಿಮಾ ನಿರ್ದೇಶಿಸುವುದು ನಿಶ್ಚಿತ ಎಂದಿದ್ದಾರೆ. 

ಐದೂವರೆ ವರ್ಷದ ಹಿಂದೆ ತೆರೆಕಂಡ ‘ಉಗ್ರಂ’ ಸೂಪರ್ ಹಿಟ್‌ ಆಗಿತ್ತು. ಚಿತ್ರದಲ್ಲಿ ನಟರಾದ ಶ್ರೀಮುರಳಿ, ತಿಲಕ್, ಶರತ್, ರಣತುಂಗ, ನಟಿ ಹರಿಪ್ರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 

ಇನ್ನಷ್ಟು... 

 ಅಧೀರನ ಗುಟ್ಟು ಬಿಚ್ಚಿಟ್ಟ ಪ್ರಶಾಂತ್‌ ನೀಲ್

'ಭರಾಟೆ' ವಿಮರ್ಶೆ: ಗುದ್ದು, ಮುದ್ದಿಗೆ ಆಯುರ್ವೇದ ಮದ್ದು!

‘ಶ್ರೀಮುರಳಿ ಬದಲಾಗಿದ್ದಾನೆ ನೋಡಿ’

ಪ್ರತಿಕ್ರಿಯಿಸಿ (+)