ಮಂಗಳವಾರ, ಅಕ್ಟೋಬರ್ 27, 2020
25 °C

‘ರೌಡಿ ಫೆಲೋ’ದಲ್ಲಿ ಪ್ರೇಮ್‌ ಸೂಪರ್‌ಕಾಪ್‌!

. Updated:

ಅಕ್ಷರ ಗಾತ್ರ : | |

Prajavani

ರೇಡಿಯೊ ಜಾಕಿ ರೋಹಿತ್‌ ನಿರ್ದೇಶಕನ ಟೊಪ್ಪಿ ಧರಿಸುವ ಜತೆಗೆ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡಲು ಅಣಿಯಾಗಿದ್ದಾರೆ. ರೋಹಿತ್‌ ನಿರ್ದೇಶನ ಮತ್ತು ನಟನೆಯ ಸಿನಿಮಾ ಹೆಸರು ‘ರೌಡಿ ಫೆಲೋ’.

‘ನೆನಪಿರಲಿ’ ಖ್ಯಾತಿಯ ಪ್ರೇಮ್ ಈ ಚಿತ್ರದಲ್ಲಿ ಸೂಪರ್‌ ಕಾಪ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೇಮ್‌ ಅವರಿಗೆ ರೋಹಿತ್ ಬೆಸ್ಟ್ ಫ್ರೆಂಡ್‌ ಆಗಿರುವುದರಿಂದ ಈ ಚಿತ್ರದಲ್ಲಿ ಸ್ನೇಹಕ್ಕಾಗಿ ಅತಿಥಿ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರಂತೆ. ಅವರು ನಿಭಾಯಿಸುತ್ತಿರುವ ಪಾತ್ರದ ಹೆಸರು ಡೇವಿಡ್‌ ರಾಜಾ.

ಪ್ರೇಮ್‌ ನಟನೆಯ ‘ಪ್ರೇಮಂ ಪೂಜ್ಯಂ’ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಇತ್ತೀಚೆಗಷ್ಟೇ ಕುಂಬಳಕಾಯಿ ಹೊಡೆದು ಚಿತ್ರತಂಡ ಸಂಭ್ರಮಿಸಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಗಿಯುವ ಹಂತದಲ್ಲಿದ್ದು, 2021ರಲ್ಲಿ ಈ ಚಿತ್ರ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. 

ಇನ್ನು ‘ರೌಡಿ ಪೆಲೋ’ ಚಿತ್ರದ ಶೂಟಿಂಗ್‌ ಸದ್ಯದಲ್ಲೇ ಶುರುವಾಗಲಿದ್ದು, ಚಿತ್ರತಂಡ ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ. ಚಿತ್ರದ ಕುರಿತು ಇನ್ನಷ್ಟು ಮಾಹಿತಿಯನ್ನು ಸದ್ಯದಲ್ಲೇ ರಿವೀಲ್‌ ಮಾಡಲು ಚಿತ್ರತಂಡ ಯೋಚಿಸಿದೆ.

ಈ ಚಿತ್ರದ ಕಥೆ ಪ್ರದೀಪ್‌ ದೊಡ್ಡಯ್ಯ ಅವರದು. 6–5= 2, ಕರ್ವ ಹಾಗೂ ದಿಯಾ ಚಿತ್ರ ನಿರ್ಮಾಣ ಮಾಡಿದ ತಂಡದ ಸಹಯೋಗ ಈ ಚಿತ್ರಕ್ಕಿದೆ. ಛಾಯಾಗ್ರಹಣ ಲವಿತ್‌, ಸಂಗೀತ ನಕುಲ್‌ ಅಭಯಂಕರ್‌ ಅವರದು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು