ಮಂಗಳವಾರ, ಜೂಲೈ 7, 2020
29 °C

ಅನೂಪ್‌ ಮೆನನ್‌ ಹೊಸ ಚಿತ್ರಕ್ಕೆ ಪ್ರಿಯಾ ವಾರಿಯರ್‌ ಹೀರೊಯಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಿಯಾ ಪ್ರಕಾಶ್‌ ವಾರಿಯರ್‌

ನಟಿ ಪ್ರಿಯಾ ಪ್ರಕಾಶ್ ವಾರಿಯರ್ ‘ವರು ಅಡಾರ್ ಲವ್’ ಸಿನಿಮಾದ ‘ಮಾಣಿಕ್ಯ ಮಲರಾಯ ಪೂವಿ’ ಸಾಂಗ್‌ನ ದೃಶ್ಯದಲ್ಲಿ ಕಣ್ಣು ಮಿಟುಕಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದು ಹಳೆಯ ಸುದ್ದಿ. ಈ ಕಣ್ಸನ್ನೆ ಮೂಲಕವೇ ದೇಶದಾದ್ಯಂತ ಅಭಿಮಾನಿ ಬಳಗ ವೃದ್ಧಿಸಿಕೊಂಡ ಆಕೆ ಬಾಲಿವುಡ್‌ ಅಂಗಳಕ್ಕೂ ಜಿಗಿದರು. ಆಕೆ ಹಿಂದಿಯಲ್ಲಿ ನಟಿಸಿರುವ ‘ಶ್ರೀದೇವಿ ಬಂಗ್ಲೊ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಪ್ರಿಯಾ ಕನ್ನಡದ ‘ವಿಷ್ಣುಪ್ರಿಯ’ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಈ ನಡುವೆ ಆಕೆ ಮತ್ತೆ ಅನೂಪ್‌ ಮೆನನ್‌ ನಟನೆಯ ಮಲಯಾಳದ ‘ಒರು ನಾಲ್ಪದುಕಾರಂಡೆ ಇರುವತ್ತೊನ್ನುಕಾರಿ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನು ವಿ.ಕೆ. ಪ್ರಕಾಶ್‌ ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ ‘ವಿಷ್ಣುಪ್ರಿಯ’ ಸಿನಿಮಾ ನಿರ್ದೇಶಿಸಿರುವುದೂ ಅವರೇ.

‘ವಿ.ಕೆ. ಪ್ರಕಾಶ್‌ ಜೊತೆಗೆ ಎರಡನೇ ಬಾರಿಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ವಿಶ್ವಾಸ ನಮ್ಮ ಮೇಲೆ ಇರಲಿ’ ಎಂದು ಅನೂಪ್‌ ಮೆನನ್‌ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಅನೂಪ್‌ ಮೆನನ್‌ ಮತ್ತು ವಿ.ಕೆ. ಪ್ರಕಾಶ್‌ ಕಾಂಬಿನೇಷನ್‌ನಡಿ 2012ರಲ್ಲಿ ತೆರೆಕಂಡ ‘ಟ್ರಿವೆಂಡ್ರಂ ಲಾಡ್ಜ್’ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಸಿಕ್ಕಿತ್ತು. ಹಾಗಾಗಿ, ಮತ್ತೆ ಈ ಜೋಡಿ ‘ಒರು ನಾಲ್ಪದುಕಾರಂಡೆ ಇರುವತ್ತೊನ್ನುಕಾರಿ’ ಚಿತ್ರದಲ್ಲಿ ಒಂದಾಗುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.