ಶನಿವಾರ, ಸೆಪ್ಟೆಂಬರ್ 18, 2021
30 °C

ಸಂಬಂಧ ಸುರಕ್ಷಿತವಾಗಿದೆ: ವಿವಾಹದ ಬಗೆಗಿನ ಆರೋಪದ ಕುರಿತು ಪ್ರಿಯಾಮಣಿ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಪತಿ ಮುಸ್ತಫಾ ರಾಜಾ ಜೊತೆಗಿನ ವಿವಾಹದ ಬಗ್ಗೆ ಕೇಳಿಬಂದಿರುವ ಆರೋಪದ ಕುರಿತು ನಟಿ ಪ್ರಿಯಾಮಣಿ ಸ್ಪಷ್ಟನೆ ನೀಡಿದ್ದಾರೆ.

'ಪ್ರಿಯಾಮಣಿ ಜೊತೆಗಿನ ಮುಸ್ತಫಾ ವಿವಾಹವು ಅಸಿಂಧುವಾಗಿದೆ. ಕಾರಣ, ಮುಸ್ತಫಾ ನನಗೆ ವಿಚ್ಛೇದನವನ್ನೇ ನೀಡಿಲ್ಲ' ಎಂದು ಅವರ ಮೊದಲ ಪತ್ನಿ ಆಯೆಷಾ ಆರೋಪಿಸಿದ್ದರು.

ಈ ಕುರಿತು 'ಬಾಲಿವುಡ್‌ ಹಂಗಾಮಾ' ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಿಯಾಮಣಿ ಮಾತನಾಡಿದ್ದಾರೆ.

'ಪತಿ ಮುಸ್ತಫಾ ವಿದೇಶದಲ್ಲಿ ಇದ್ದರೂ ಸಹ ನಾವು ಪ್ರತಿದಿನವೂ ಸಂಪರ್ಕದಲ್ಲಿದ್ದೇವೆ. ಸಂಬಂಧಗಳಲ್ಲಿ ಸಂವಹನವೇ ಮುಖ್ಯವೆಂದು ನಾನು ನಂಬಿದ್ದೇನೆ. ನಮ್ಮ ಸಂಬಂಧದಲ್ಲಿ ನಾವು ಖಂಡಿತವಾಗಿಯೂ ಸುರಕ್ಷಿತರಾಗಿದ್ದೇವೆ. ಇದೀಗ ಮುಸ್ತಫಾ ಅಮೆರಿಕದಲ್ಲಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಪ್ರತಿದಿನ ಮಾತಾಡುತ್ತೇವೆ' ಎಂದು ತಿಳಿಸಿದ್ದಾರೆ.

2013ರಲ್ಲಿ ಮೊದಲ ಪತ್ನಿ ಆಯೆಷಾರಿಂದ ದೂರವಾದ ಮುಸ್ತಫಾ 2017ರಲ್ಲಿ ನಟಿ ಪ್ರಿಯಾಮಣಿ ಅವರನ್ನು ವಿವಾಹವಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು