ಭಾನುವಾರ, ನವೆಂಬರ್ 28, 2021
20 °C

‘ಸಿಟಾಡೆಲ್‌’ ಚಿತ್ರೀಕರಣದ ವೇಳೆ ಗಾಯಗೊಂಡ ನಟಿ ಪ್ರಿಯಾಂಕಾ ಚೋಪ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು ‘ಸಿಟಾಡೆಲ್‌’ ವೆಬ್ ಸೀರಿಸ್‌ನ ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ.

ಈ ಕುರಿತು ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊ ಹಂಚಿಕೊಂಡಿದ್ದು, ಅವರ ಕೆನ್ನೆ ಮತ್ತು ಹಣೆಯ ಮೇಲೆ ಗಾಯಗಳಾಗಿವೆ. ಆದರೆ, ಈ ಫೋಟೊದಲ್ಲಿ ಯಾವುದು ನಿಜ? ಯಾವುದು ನಿಜವಲ್ಲ? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
 
ಕೆಲವು ಗಂಟೆಗಳ ಬಳಿಕ ಮತ್ತೊಂದು ಫೋಟೊ ಹಂಚಿಕೊಂಡಿರುವ ಪ್ರಿಯಾಂಕಾ, ‘ಹಣೆಯಲ್ಲಿರುವ ರಕ್ತ ನಿಜವಲ್ಲ. ಆದರೆ, ಹುಬ್ಬಿನ ಮೇಲೆ ಆದ ಗಾಯ ನಿಜ’ ಎಂದು ಎಂದು ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ, ಗಾಯಕ ನಿಕ್​ ಜೋನಸ್​ ಅವರೊಂದಿಗೆ ಮದುವೆಯಾದ ಬಳಿಕ ಅಮೆರಿಕದಲ್ಲಿ ನೆಲೆಸಿದ್ದಾರೆ. ಸದ್ಯ ಅವರು ಹಾಲಿವುಡ್‌ ಚಿತ್ರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.


ಗಾಯಗೊಂಡಿರುವ ಪ್ರಿಯಾಂಕಾ ಚೋಪ್ರಾ –(ಇನ್‌ಸ್ಟಾಗ್ರಾಮ್‌ ಚಿತ್ರ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು