ಮಂಗಳವಾರ, ಅಕ್ಟೋಬರ್ 19, 2021
22 °C

ಈಗ ಪ್ರಿಯಾಂಕಾ ನಂದಿನಿ ಟೀಚರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸರ್ಕಾರಿ ಶಾಲೆ ಯಾವುದಕ್ಕೂ ಕಡಿಮೆ ಇಲ್ಲ ಎನ್ನುತ್ತಿದ್ದಾರೆ ‘ಮಿಸ್‌ ನಂದಿನಿ’. ಹೌದು ಪ್ರಿಯಾಂಕಾ ಉಪೇಂದ್ರ ‘ಮಿಸ್‌ ನಂದಿನಿ’ಯಾಗಿ ಕಾಣಿಸಿಕೊಂಡಿದ್ದಾರೆ.

‘ಸರ್ಕಾರಿ ಶಾಲೆಯ ಸುತ್ತ ಹೆಣೆದ ಕಥೆ ‘ಮಿಸ್‌ ನಂದಿನಿ’. ‘ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ ಮನೋಭಾವ ಸಲ್ಲದು. ಅಲ್ಲಿನ ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ. ಈ ಸಂದೇಶ ಸಾರಲು ಈ ಚಿತ್ರ ಮುಂದಾಗಿದೆ’ ಎಂದರು ಪ್ರಿಯಾಂಕಾ.

‘ಶಿಕ್ಷಕಿಯ ಪಾತ್ರದ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈ ಚಿತ್ರದಿಂದ ಶಿಕ್ಷಣ ಕ್ಷೇತ್ರದಲ್ಲಿ ಒಂದಿಷ್ಟು ಬದಲಾವಣೆ ಮೂಡಿಸಲು ಪ್ರಯತ್ನಿಸುತ್ತೇನೆ. ಮಕ್ಕಳ ಒಡನಾಟ, ಕಲಿಕೆ ನನಗೆ ಮೊದಲಿನಿಂದಲೂ ಇಷ್ಟ. ಇದೀಗ ಪಾತ್ರವಾಗಿ ನನ್ನ ಆಸೆಗೆ ರೆಕ್ಕೆ ಮೂಡಿದೆ. ಲಘು ಹಾಸ್ಯ ಸೇರಿದ್ದು, ಮನೋರಂಜನಾತ್ಮಕ ಅಂಶಗಳನ್ನು ಈ ಚಿತ್ರ ಹೊಂದಿದೆ’ ಎಂದರು.

ದಸರಾ ಬಳಿಕ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು