ಭಾನುವಾರ, ನವೆಂಬರ್ 29, 2020
21 °C

ಪುನೀತ್‌ ನಿರ್ಮಿಸಲಿದ್ದಾರೆ ಮೆಡಿಕಲ್ ಥ್ರಿಲರ್‌ ’O2'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

'ಕವಲುದಾರಿ‘, ‘ಮಾಯಾಬಜಾರ್‌‘ನಂತಹ ಸೃಜನಾತ್ಮಕ ಯಶಸ್ವಿ ಸಿನಿಮಾಗಳನ್ನು ನೀಡಿರುವ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್‌ರಾಜ್‌ ಕುಮಾರ್‌ ಅವರ ಪಿ.ಆರ್‌.ಕೆ.ಪ್ರೊಡಕ್ಷನ್, ಈಗ ‘O2' ಎಂಬ ಹೆಸರಿನ ಮತ್ತೊಂದು ಸೃಜನಾತ್ಮಕ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ.

‘ಮಾಯಾಬಜಾರ್‌‘ ಸಿನಿಮಾ ನಿರ್ದೇಶಿಸಿದ್ದ ರಾಧಾಕೃಷ್ಣ ರೆಡ್ಡಿ, ಈ ಸಿನಿಮಾದ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಪ್ರಶಾಂತ್ ರಾಜ್ ಮತ್ತು ರಾಘವ್ ಎಂಬ ಹೊಸಬರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ರಾಘವ್‌ ಟ್ಯಾಟೂ ಕಲಾವಿದರು ಹಾಗೂ ಪ್ರಶಾಂತ್‌ ಆರ್ಕಿಟೆಕ್ಟ್.

ವೈದ್ಯಕೀಯ ಲೋಕಕ್ಕೆ ಸಂಬಂಧಿಸಿದ ಥ್ರಿಲ್ಲರ್ ಕಥೆಯಾಧಾರಿತ ಚಿತ್ರದಲ್ಲಿ ಯಾರೆಲ್ಲ ಅಭಿನಯಿಸುತ್ತಿದ್ದಾರೆ ಎನ್ನುವುದನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವ ಪಿ ಆರ್ ಕೆ ಬ್ಯಾನರ್ ಈ ಸಿನಿಮಾಕ್ಕೂ ಹೊಸಬರನ್ನೇ ಹುಡುಕುತ್ತಿದೆಯಂತೆ. ಕೊರೊನಾ – ಲಾಕ್‌ಡೌನ್‌ ಸಂದರ್ಭವಾದ್ದರಿಂದ ಆನ್‌ಲೈನ್‌ ಮೂಲಕ ಆಡಿಷನ್‌ ನಡೆಸುತ್ತಿದ್ದಾರಂತೆ.

ಪಿ.ಆರ್‌.ಕೆ ಪ್ರೊಡಕ್ಷನ್‌ ನಿರ್ಮಾಣ ಮಾಡಿದ್ದ ‘ಕವಲುದಾರಿ‘ ಮತ್ತು ‘ಮಾಯಾಬಜಾರ್‌‘ ಸಿನಿಮಾಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇದಾದ ನಂತರ  ‘ಫ್ರೆಂಚ್‌ ಬಿರಿಯಾರಿ‘, ‘ಲಾ‘ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಗಳು ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೆ ಸಜ್ಜಾಗಿವೆ. ಈಗ ‘ಫ್ಯಾಮಿಲಿ ಪ್ಯಾಕ್‌‘ ಸಿನಿಮಾ ಮಾಡುವುದಾಗಿ ಸಂಸ್ಥೆ ಪ್ರಕಟಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು