ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಡಬಲ್ ಇಸ್ಮಾರ್ಟ್’ ಚಿತ್ರ ಆಗಸ್ಟ್‌ 15ಕ್ಕೆ ತೆರೆಗೆ: ‘ಪುಷ್ಪ– 2’ ಅಂದೇ ಬಿಡುಗಡೆ

Published 15 ಜೂನ್ 2024, 12:43 IST
Last Updated 15 ಜೂನ್ 2024, 12:43 IST
ಅಕ್ಷರ ಗಾತ್ರ

ಮುಂಬೈ: ಪುರಿ ಜಗನ್ನಾಥ್ ನಿರ್ದೇಶನದ, ನಟ ರಾಮ್‌ ಪೋತಿನೇನಿ ಅಭಿನಯದ ‘ಡಬಲ್ ಇಸ್ಮಾರ್ಟ್’ ಚಿತ್ರವು ಇದೇ ಆಗಸ್ಟ್‌ 15ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

ಈ ಸಂಬಂಧ ಚಿತ್ರ ನಿರ್ಮಾಣ ಸಂಸ್ಥೆ ‘ಪುರಿ ಕನೆಕ್ಷನ್‘ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದೆ.

‘ಡಬಲ್ ಇಸ್ಮಾರ್ಟ್’ ಚಿತ್ರವು 2019ರಲ್ಲಿ ತೆರೆ ಕಂಡಿದ್ದ ‘ಇಸ್ಮಾರ್ಟ್‌ ಶಂಕರ್‌’ ಚಿತ್ರದ ಮುಂದುವರಿದ ಭಾಗವಾಗಿದೆ. ಈ ಚಿತ್ರವು ಕ್ರೈಮ್‌ ಕಥಾಹಂದರ ಒಳಗೊಂಡಿದೆ ಎನ್ನಲಾಗಿದೆ.

ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಭಾ ನಟೇಶ್‌ ಸೇರಿದಂತೆ ತಾರಾಗಣವಿದೆ. ಈ ಚಿತ್ರದಲ್ಲಿ ಮಣಿ ಶರ್ಮಾ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿಬರಲಿವೆ.

‘ಡಬಲ್ ಇಸ್ಮಾರ್ಟ್’ ಚಿತ್ರ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ.

ತೆಲುಗಿನ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ' ಚಿತ್ರದ ಭಾಗ 2 ‘ಪುಷ್ಪ–ದಿ ರೂಲ್’ ಇದೇ ವರ್ಷ ಆಗಸ್ಟ್ 15ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಅಧಿಕೃತವಾಗಿ ಚಿತ್ರತಂಡ ತಿಳಿಸಿದೆ.

ಈಗಾಗಲೇ ಬಿಡುಗಡೆಗೊಂಡಿರುವ ‘ಪುಷ್ಪ–ದಿ ರೂಲ್’ ಚಿತ್ರದ ಟೀಸರ್, ಹಾಡುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT