ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಐಶ್ವರ್ಯ– ನಟ ಉಮಾಪತಿ ರಾಮಯ್ಯ

Published 11 ಜೂನ್ 2024, 9:17 IST
Last Updated 13 ಜೂನ್ 2024, 3:18 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಖ್ಯಾತ ನಟ ಅರ್ಜುನ್‌ ಸರ್ಜಾ ಮಗಳು ಹಾಗೂ ನಟಿ ಐಶ್ವರ್ಯ ಅವರು ತಮಿಳಿನ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಅವರೊಂದಿಗೆ ಜೂನ್‌ 10ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಜೂನ್ 14ರಂದು ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ನಡೆಯಲಿದೆ.

ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ದೇವಸ್ಥಾನದಲ್ಲಿ ಜೂನ್ ಹತ್ತರಂದು ಅದ್ದೂರಿಯಾಗಿ ನೆರವೇರಿದೆ.

ಎರಡು ಕುಟುಂಬದ ಬಂಧುಗಳು ಹಾಗೂ ಹತ್ತಿರದ‌ ಮಿತ್ರರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

ಉಮಾಪತಿ ಮತ್ತು ಐಶ್ವರ್ಯ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. 2023ರ ಅಕ್ಟೋಬರ್ 27ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.

ನಟಿ ಐಶ್ವರ್ಯ 2018ರಲ್ಲಿ ತೆರೆಕಂಡ ‘ಪ್ರೇಮ ಬರಹ’ಚಿತ್ರದಲ್ಲಿ ನಟ ಚಂದನ್ ಕುಮಾರ್‌ ಅವರೊಂದಿಗೆ ನಟಿಸಿದ್ದರು. ಈ ಚಿತ್ರಕ್ಕೆ ಅರ್ಜುನ್‌ ಸರ್ಜಾ ಆ್ಯಕ್ಷನ್‌ ಕಟ್‌ ಹೇಳಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳುನಲ್ಲಿ ಬಿಡುಗಡೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT