ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುಷ್ಪ–2 ಚಿತ್ರಕ್ಕೆ ಅಕ್ಷಯ್‌ ಕುಮಾರ್‌ ಅಭಿನಯದ ಖೇಲ್‌ ಖೇಲ್‌ ಮೇ ಚಿತ್ರ ಪೈಪೋಟಿ?

Published 13 ಜೂನ್ 2024, 12:29 IST
Last Updated 13 ಜೂನ್ 2024, 12:29 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅಭಿನಯದ ‘ಖೇಲ್‌ ಖೇಲ್‌ ಮೇ’ ಚಿತ್ರವು ಇದೇ ವರ್ಷ ಆಗಸ್ಟ್‌ 15ರಂದು ಬಿಡುಗಡೆಯಾಗಲಿದ್ದು, ಅಂದೇ ಬಿಡುಗಡೆಗೆ ಸಜ್ಜಾಗಿರುವ ಪುಷ್ಪ–2 ಸಿನಿಮಾಗೆ ಪೈಪೋಟಿ ನೀಡಲಿದೆ ಎನ್ನಲಾಗಿದೆ.

ಈ ಹಿಂದೆ 'ಖೇಲ್ ಖೇಲ್ ಮೇ ಚಿತ್ರವನ್ನು 2024ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಚಿತ್ರ ತಯಾರಕರು ನಿರ್ಧರಿಸಿದ್ದರು. ಆದರೆ ಇದೀಗ ಬಿಡುಗಡೆಯ ದಿನಾಂಕವನ್ನು ಬದಲಾಯಿಸಿದ್ದಾರೆ.

ಈ ಸಂಬಂಧ ಪ್ರೊಡಕ್ಷನ್ ಹೌಸ್ ಟಿ-ಸೀರೀಸ್ ಇನ್‌ಸ್ಟಾಗ್ರಾಮ್‌ನಲ್ಲಿ ' ಖೇಲ್ ಖೇಲ್ ಮೇ‘ ಚಿತ್ರ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದೆ.

ಈ ಚಿತ್ರಕ್ಕೆ ಮುದಾಸ್ಸರ್ ಅಜೀಜ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ತಾಪ್ಸೀ ಪನ್ನು, ವಾಣಿ ಕಪೂರ್, ಫರ್ದೀನ್ ಖಾನ್, ಆಮಿ ವಿರ್ಕ್, ಆದಿತ್ಯ ಸೀಲ್ ಮತ್ತು ಪ್ರಜ್ಞಾ ಜೈಸ್ವಾಲ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವನ್ನು ಭೂಷಣ್ ಕುಮಾರ್ , ಕ್ರಿಶನ್ ಕುಮಾರ್ , ವಿಪುಲ್ ಡಿ ಶಾ, ಅಶ್ವಿನ್ ವರ್ದೆ, ರಾಜೇಶ್ ಬಹ್ಲ್, ಶಶಿಕಾಂತ್ ಸಿನ್ಹಾ ಮತ್ತು ಅಜಯ್ ರೈ ನಿರ್ಮಿಸಿದ್ದಾರೆ.

ತೆಲುಗಿನ ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ' ಚಿತ್ರದ ಭಾಗ 2 ‘ಪುಷ್ಪ–ದಿ ರೂಲ್’ ಇದೇ ವರ್ಷ ಆಗಸ್ಟ್ 15ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ ಎಂದು ಅಧಿಕೃತವಾಗಿ ಚಿತ್ರತಂಡ ತಿಳಿಸಿದೆ.

ಈಗಾಗಲೇ ಬಿಡುಗಡೆಗೊಂಡಿರುವ ‘ಪುಷ್ಪ–ದಿ ರೂಲ್’ ಚಿತ್ರದ ಟೀಸರ್, ಹಾಡುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT