ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರಿಗೆ ಕ್ಯುಪಿಎಲ್ ಕ್ರಿಕೆಟ್ ಟೂರ್ನಿ

Published 1 ಜುಲೈ 2024, 0:11 IST
Last Updated 1 ಜುಲೈ 2024, 0:11 IST
ಅಕ್ಷರ ಗಾತ್ರ

ಬೆಂಗಳೂರು: ಕಿರುತೆರೆ ಹಾಗೂ ಹಿರಿತೆರೆ ಕಲಾವಿದೆಯರಿಗಾಗಿ ಮೊದಲ ಬಾರಿಗೆ ಕ್ವೀನ್ಸ್‌ ಪ್ರೀಮಿಯರ್ ಲೀಗ್‌ (ಕ್ಯುಪಿಎಲ್) ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. 

ಕ್ರಿಯೇಟಿವ್‌ ಫ್ರೆಂಡ್ಸ್ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ಜುಲೈ 20, 21ರಂದು ಈ ಟೂರ್ನಿ ನಡೆಯಲಿದೆ. ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಹತ್ತು ತಂಡಗಳಿಗೂ ನಾಯಕರ ಆಯ್ಕೆ ಹಾಗೂ ಪೋಷಾಕು ಬಿಡುಗಡೆ ಮಾಡಲಾಯಿತು. ಇದೇ ವೇಳೆ ನಟ ಅನಿರುದ್ಧ್‌ ಜತ್ಕರ್‌ ಅವರು ಟ್ರೋಫಿಯನ್ನು ಅನಾವರಣ ಮಾಡಿದರು. 

ಬೆಳಗಾವಿ ಕ್ವೀನ್ಸ್‌, ಹುಬ್ಬಳ್ಳಿ ಕ್ವೀನ್ಸ್‌, ಬೆಂಗಳೂರು ಕ್ವೀನ್ಸ್‌, ಮೈಸೂರು ಕ್ವೀನ್ಸ್‌,  ಕೋಲಾರ್ ಕ್ವೀನ್ಸ್‌, ಮಂಗಳೂರು ಕ್ವೀನ್ಸ್‌, ಶಿವಮೊಗ್ಗ ಕ್ವೀನ್ಸ್‌, ಚಿತ್ರದುರ್ಗ ಕ್ವೀನ್ಸ್‌, ಹಾಸನ ಕ್ವೀನ್ಸ್‌, ಬಳ್ಳಾರಿ ಕ್ವೀನ್ಸ್‌ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಯಿತು. ಐದು ಓವರ್‌ಗಳ ಪಂದ್ಯ ಇದಾಗಿದ್ದು, ವಿಜೇತ ತಂಡಕ್ಕೆ ₹ 6 ಲಕ್ಷ ನಗದು ಹಾಗೂ ರನ್ನರ್ಸ್‌ ಅಪ್ ತಂಡಕ್ಕೆ ₹ 3 ಲಕ್ಷ ಬಹುಮಾನ ನೀಡಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT