‘ಬಾಹುಬಲಿ‘ ಖ್ಯಾತಿಯ ನಟ ಪ್ರಭಾಸ್ ಅಭಿನಯದ 21ನೇ ಚಿತ್ರದ ‘ಫಸ್ಟ್ಲುಕ್‘ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹೊಸಚಿತ್ರಕ್ಕೆ ‘ರಾಧೆ ಶ್ಯಾಮ್’ ಎಂದು ಟೈಟಲ್ ಇಡಲಾಗಿದೆ.

ಇದು ರೋಮ್ಯಾಂಟಿಕ್ ಕಥೆಯಾಧಾರಿತ ಸಿನಿಮಾವಾಗಿದ್ದು, ಪ್ರಭಾಸ್ಗೆ ಜೋಡಿಯಾಗಿಇದೇ ಮೊದಲ ಬಾರಿಗೆ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಚಿತ್ರದ ‘ಫಸ್ಟ್ಲುಕ್‘ ಅನ್ನು ಪೂಜಾ ಹೆಗ್ಡೆ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಸುಂದರ ಚಿತ್ರಕ್ಕೆ ಸುಂದರ ಶೀರ್ಷಿಕೆ’ ಎಂದು ಅಡಿಬರಹ ಬರೆದುಕೊಂಡಿದ್ದಾರೆ.

ಪೂಜಾರೊಂದಿಗೆ ರೊಮ್ಯಾಂಟಿಕ್ ಆಗಿ ಪೋಸ್ ನೀಡಿರುವ ಈ ಫೋಟೊವನ್ನು ಪ್ರಭಾಸ್ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇದು ನಿಮಗಾಗಿ ಅಭಿಮಾನಿಗಳೇ, ನಿಮಗೆ ಇಷ್ಟವಾಗುತ್ತದೆ ಎಂಬ ನಂಬಿಕೆಯಿದೆ’ ಎಂದು ಹೇಳಿದ್ದಾರೆ.

ರಾಧೆ ಶ್ಯಾಮ್ ಚಿತ್ರತಂಡ ‘ಫಸ್ಟ್ಲುಕ್‘ ಬಿಡುಗಡೆ ಮಾಡಿದ ಕೆಲವೇ ಕ್ಷಣಗಳಲ್ಲಿ ಹ್ಯಾಷ್ಟ್ಯಾಗ್ ‘#ಪ್ರಭಾಸ್20ಫಸ್ಟ್ಲುಕ್’ ಟ್ವಿಟರ್ನಲ್ಲಿ ಟ್ರೆಂಡ್ ಸೃಷ್ಟಿಸಿದೆ.

ಇದು ಪ್ರಭಾಸ್ ಅವರ 21ನೇ ಚಿತ್ರ. ಅಷ್ಟೇ ಅಲ್ಲ, ಪ್ರಭಾಸ್ಗೆ ಖ್ಯಾತಿ ತಂದುಕೊಟ್ಟ ‘ಬಾಬುಬಲಿ’ ಸಿನಿಮಾ ರಿಲೀಸ್ ಆಗಿದ್ದೂ ಇದೇ ಜುಲೈ 10ರಂದು. ಹಾಗಾಗಿ, ಈ ದಿನ ಅವರಿಗೆ ಬಹಳ ವಿಶೇಷ. ಇದೇ ಕಾರಣಕ್ಕೇ ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.

ರಾಧಾಕೃಷ್ಣಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಉಳಿದಂತೆ ಮುರಳಿ ಶರ್ಮಾ, ಭಾಗ್ಯಶ್ರೀ, ಪ್ರಿಯಾದರ್ಶಿ ಮತ್ತಿರರು ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.