ಶನಿವಾರ, ಸೆಪ್ಟೆಂಬರ್ 25, 2021
29 °C

ನಾನು ಕಪ್ಪೆಯಂತೆ ಕಾಣಿಸುತ್ತೇನೆ.. ನೀವು ಯಾವ ಪ್ರಾಣಿ?: ರಾಧಿಕಾ ಅಪ್ಟೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Radhika Apte Instagram Post

ಬೆಂಗಳೂರು: ಬಾಲಿವುಡ್‌ನಲ್ಲಿ ವಿವಿಧ ಸಂದರ್ಭಗಳಲ್ಲಿ ವಿವಾದದ ಮೂಲಕ ಸುದ್ದಿಯಾಗಿದ್ದ ನಟಿ ರಾಧಿಕಾ ಅಪ್ಟೆ, ತಾವು ಕಪ್ಪೆಯಂತೆ ಕಾಣಿಸುತ್ತಿದ್ದೇನೆ ಎಂದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿರುವ ನಟಿ ರಾಧಿಕಾ ಅಪ್ಟೆ, ಪ್ರತಿಯೊಬ್ಬರೂ ಪ್ರಾಣಿಗಳೇ, ನಾನು ಕಪ್ಪೆಯಂತೆ ಕಾಣಿಸುತ್ತಿದ್ದೇನೆ, ನೀವು ಯಾವ ಪ್ರಾಣಿ ಎಂಬ ಅಡಿಬರಹದೊಂದಿಗೆ ಜನರಿಗೆ ಪ್ರಶ್ನೆಯನ್ನೂ ಕೇಳಿದ್ದಾರೆ.

ನಟಿ ರಾಧಿಕಾ ಅಪ್ಟೆ, ನೇರಳೆ ಬಣ್ಣದ ಉಡುಗೆ ಧರಿಸಿ, ಕಪ್ಪೆಯ ಪ್ರತಿಕೃತಿ ಸಮೀಪದಲ್ಲೇ ಕುಳಿತುಕೊಂಡು ಫೋಟೊ ತೆಗೆಸಿಕೊಂಡಿದ್ದಾರೆ. ಕಪ್ಪೆಯ ಪ್ರತಿಮೆಯನ್ನು ಅನುಕರಿಸಿ, ರಾಧಿಕಾ ಫೋಟೊಗೆ ಪೋಸ್ ನೀಡಿದ್ದಾರೆ.

ನಟಿ ಫೋಸ್ಟ್‌ಗೆ ವಿವಿಧ ರೀತಿಯ ಕಮೆಂಟ್‌ಗಳು ಬಂದಿವೆ.

ರಾಧಿಕಾ ಅಪ್ಟೆ, ವಾಸನ್ ಬಾಲಾ ಅವರ ‘ಮೋನಿಕಾ, ಓ ಮೈ ಡಾರ್ಲಿಂಗ್’ ವೆಬ್‌ಸಿರೀಸ್‌ನ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು