ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಮಿಂಚಿದ ಯಶ್, ರಾಧಿಕಾ ಪಂಡಿತ್‌

Last Updated 26 ಫೆಬ್ರುವರಿ 2022, 10:53 IST
ಅಕ್ಷರ ಗಾತ್ರ

ಚಂದನವನದ ನಟ ಯಶ್‌, ನಟಿ ರಾಧಿಕಾ ಪಂಡಿತ್‌ ದಂಪತಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು ಅಲ್ಲಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ರಾಧಿಕಾ ಪಂಡಿತ್‌ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೊಗಳನ್ನು ಶೇರ್‌ ಮಾಡಿದ್ದಾರೆ. ಯಶ್‌ ಮತ್ತು ರಾಧಿಕಾ ಅಭಿಮಾನಿಗಳು ಈ ಚಿತ್ರಗಳಿಗೆ ಲೈಕ್‌ ಮತ್ತು ಕಾಮೆಂಟ್‌ ಹಾಕುತ್ತಿದ್ದಾರೆ.

ಈ ಮದುವೆ ಕಾರ್ಯಕ್ರಮದಲ್ಲಿ ರಾಧಿಕಾ, ಯಶ್​ ಮಕ್ಕಳಾದ ಆಯ್ರಾ ಹಾಗೂ ಯಥರ್ವ್​ ಕೂಡ ಪಾಲ್ಗೊಂಡಿದ್ದರು. ಈ ಪುಟಾಣಿಗಳ ಫೋಟೊಗಳು ಅಭಿಮಾನಿಗಳಿಗೆ ಇಷ್ಟವಾಗಿವೆ.

ರಾಧಿಕಾ ಪಂಡಿತ್ ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದರೆ, ಯಶ್​ ಕಪ್ಪು ಬಣ್ಣದ ಕುರ್ತಾತೊಟ್ಟಿದ್ದರು. ಆಯ್ರಾ ಹಾಗೂ ಯಥರ್ವ್​ ಕೂಡ ಹೊಸ ಬಟ್ಟೆ ತೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT