ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ ರಾಘವ ಚಡ್ಡಾ–ಪರಿಣಿತಿ ಚೋಪ್ರಾ ನಿಶ್ಚಿತಾರ್ಥ?

Last Updated 3 ಏಪ್ರಿಲ್ 2023, 12:41 IST
ಅಕ್ಷರ ಗಾತ್ರ

ಆಮ್‌ ಆದ್ಮಿ ಪಕ್ಷದ ನಾಯಕ ರಾಘವ ಚಡ್ಡಾ ಮತ್ತು ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಜೋಡಿ ಇತ್ತೀಚಿನ ದಿನಗಳಲ್ಲಿ ಕ್ಯಾಮರಾ ಕಣ್ಣಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಏ‍ಪ್ರಿಲ್‌ ಮೊದಲ ವಾರದಲ್ಲಿ ಈ ಜೋಡಿ ಪರಸ್ಪರ ಉಂಗುರ ಬದಲಾಯಿಸಿಕೊಳ್ಳಲಿದೆ ಎಂಬ ಗುಸುಗುಸು ಕೇಳಿಬರುತ್ತಿದೆ.

ರಾಘವ ಚಡ್ಡಾ ಸದ್ಯ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಣಿತಿ ಚೋಪ್ರಾ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯ ನಟಿ ಏನಿಸಿಕೊಂಡಿದ್ದಾರೆ. ಜನಪ್ರಿಯ ನಟಿ ಪ್ರಿಯಾಂಕ ಚೋಪ್ರಾ ಜೋನಾಸ್‌ ಸಂಬಂಧಿಯೂ ಆಗಿದ್ದಾರೆ.

ಮೊದಲ ಬಾರಿಗೆ ಈ ಜೋಡಿ ಲಂಡನ್‌ನಲ್ಲಿ ಕಾಣಿಸಿದ್ದು, ತದನಂತರ ಮುಂಬೈನ ಹೋಟೆಲ್‌ವೊಂದರಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದರು.ಇತ್ತೀಚೆಗೆ ದೆಹಲಿ ಮತ್ತು ಮುಂಬೈನ ಏರ್‌ಪೋರ್ಟ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಆ ಮೂಲಕ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಅನುಮಾನಕ್ಕೆ ಪುಷ್ಟಿ ನೀಡಿದ್ದರು.

ಇತ್ತೀಚೆಗೆ ಪರಿಣಿತಿ ಚೋಪ್ರಾ ಪ್ರಖ್ಯಾತ ವಸ್ತ್ರವಿನ್ಯಾಸಕ ಮನೀಶ್‌ ಮಲ್ಹೋತ್ರ ಅವರ ಮನೆಗೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಇವರಿಬ್ಬರು ಎಂಗೇಜ್‌ಮೆಂಟ್‌ ಸುದ್ದಿ ಹರಿದಾಡುತ್ತಿದೆ.

ಮೂಲವೊಂದರ ಪ್ರಕಾರ ಈ ಸಮಾರಂಭದಲ್ಲಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಷ್ಟೇ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಜನಪ್ರಿಯ ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್‌ ಜೋನಾಸ್‌ ದಂಪತಿ, ಮೀರಾ ಚೋಪ್ರಾ ಎಂಗೇಜ್‌ಮೆಂಟ್‌ನಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT