ಸೋಮವಾರ, ಮಾರ್ಚ್ 27, 2023
31 °C

ರಾಜ್ಯಪಾಲರಾದರು ರಾಘವೇಂದ್ರ ರಾಜ್‌ಕುಮಾರ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಧ್ರುವ 369’ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ರಾಜ್ಯಪಾಲರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣವು ನಂದಿಬೆಟ್ಟ ಬಳಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಿತು.

ನಿರ್ದೇಶಕ ಶಂಕರ್‌ನಾಗ್ ಪ್ರಕಾರ, ‘ರಾಘವೇಂದ್ರ ರಾಜ್‌ಕುಮಾರ್‌ ಅವರು ಕಥೆಯ ಪ್ರಾರಂಭ, ಮಧ್ಯಂತರ ಹಾಗೂ ಕ್ಲೈಮ್ಯಾಕ್ಸ್‌ನಲ್ಲಿ ಇರುತ್ತಾರೆ. ಪುರಾಣ ಕಾಲದ ಧ್ರುವ ನಕ್ಷತ್ರ ಕಥೆಗೂ ಈಗಿನ ಖಗೋಳಶಾಸ್ತ್ರಕ್ಕೂ ಸಂಬಂಧವಿರುವ ಕಥೆಯಿದೆ. ಅಲ್ಲದೆ ಕುತೂಹಲಕಾರಿ ಅಂಶ ಅಡಗಿದೆ. ಮುಖ್ಯ ಪಾತ್ರದಲ್ಲಿ ರಮೇಶ್‌ ಭಟ್, ಅತೀಶ್‌ ಶೆಟ್ಟಿ, ಚಂದನಾ, ನಮಿತಾ, ಸಂದೀಪ್‌ ಮಲಾನಿ, ಅರುಣ್‌ ಸಾಗರ್, ಮೇಘಾ ಗೌಡ, ಭಾಸ್ಕರ್‌ ಮಣಿಪಾಲ ಹಾಗೂ ಮಂಗಳೂರಿನ ರಂಗಭೂಮಿ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ನಾನು ಸಹ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದೇನೆ’ ಎಂದು ಮಾಹಿತಿ ನೀಡಿದರು.

ಶ್ರೀಕೃಷ್ಣ ಕಾಂತಿಲ ಅವರು ಅಚಿಂತ್ಯ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸತೀಶ್‌ಬಾಬು ಸಂಗೀತ ನಿರ್ದೇಶನ, ಮಹಾಬಲ ಛಾಯಾಗ್ರಹಣ, ಸುಬ್ರಹ್ಮಣ್ಯ ಐರೋಡಿ ಸಂಕಲನ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.