ಭಾನುವಾರ, ಮಾರ್ಚ್ 26, 2023
24 °C

ಅಪ್ಪಾಜಿಯೊಂದಿಗೆ ‘ಅಪ್ಪು’ವಿನ ಅಪರೂಪದ ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೀತಿಯ ತಮ್ಮ ಪುನೀತ್‌ ರಾಜ್‌ಕುಮಾರ್‌ ಅವರನ್ನು ಕಳೆದುಕೊಂಡ ನೋವು ನಟ ರಾಘವೇಂದ್ರ ರಾಜ್‌ಕುಮಾರ್‌ ಅವರನ್ನು ದಿನವೂ ಕಾಡುತ್ತಿದೆ. ಪ್ರತಿನಿತ್ಯವೂ ತಮ್ಮ ಟ್ವಿಟರ್‌ ಖಾತೆಯಲ್ಲಿ ಅಪ್ಪುವನ್ನು ನೆನೆದು ಪೋಸ್ಟ್‌ ಮಾಡುತ್ತಿರುವ ಅವರು, ಮಂಗಳವಾರ ಅಪ್ಪಾಜಿಯೊಂದಿಗೆ ಅಪ್ಪು ಕಳೆದ ಅಪರೂಪದ ಕ್ಷಣಗಳ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದಾರೆ.

‘ಅಪ್ಪು ಮಗನೇ, ನಾನು ನಿರುದ್ಯೋಗಿಯಾಗಿದ್ದೆ. ಸಮಾಜ ಸೇವೆ ಮಾಡುತ್ತಾ ಮುಂದುವರಿಯುವ ಶ್ರೇಷ್ಠ ಕೆಲಸವನ್ನು ನೀನು ನನಗೆ ನೀಡಿದ್ದಿ. ಪ್ರಚಾರದ ಯಾವುದೇ ಆಸೆ ಇಲ್ಲದೆ ಸೇವೆ ಮಾಡುವ ಕೆಲಸ ನೀಡಿದ್ದಿ. ಇದಕ್ಕಾಗಿ ನನಗೆ ಎಲ್ಲ ಶಕ್ತಿಯನ್ನು ನೀಡು ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಿನ್ನ ನೆನಪಿನಲ್ಲಿ ಸದಾ ಜೀವಿಸುತ್ತೇನೆ’ ಎಂದು ಉಲ್ಲೇಖಿಸಿ ರಾಘವೇಂದ್ರ ರಾಜ್‌ಕುಮಾರ್‌ ಪೋಸ್ಟ್‌ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು