ಸೋಮವಾರ, ಆಗಸ್ಟ್ 8, 2022
24 °C

ನನ್ನ ವಿಚ್ಛೇದಿತ ಪತ್ನಿಯ ಆರೋಪದಲ್ಲಿ ಹುರುಳಿಲ್ಲ: ಶಿಲ್ಪಾ ಶೆಟ್ಟಿ ಪತಿ ರಾಜ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ನಟಿ ಶಿಲ್ಪಾ ಶೆಟ್ಟಿಯೇ ನಮ್ಮ ದಾಂಪತ್ಯ ಜೀವನ ಹಾಳು ಮಾಡಿದರು ಎಂದು ವಿಚ್ಛೇದಿತ ಪತ್ನಿ ಕವಿತಾ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ‘ ಎಂದು ರಾಜ್‌ ಕುಂದ್ರ ಹೇಳಿದ್ದಾರೆ.

ಖಾಸಗಿ ಟಿ.ವಿ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಶಿಲ್ಪಾ ಶೆಟ್ಟಿ ವಿರುದ್ಧ ಕವಿತಾ ಗಂಭೀರ ಆರೋಪ ಮಾಡಿದ್ದರು. ಈ ಸಂದರ್ಶನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಬಾಲಿವುಡ್‌ ಸುದ್ದಿಗಳನ್ನು ಆನ್‌ಲೈನ್‌ನಲ್ಲಿ ಬಿತ್ತರಿಸುವ ‘ಪಿಂಕ್‌ ವಿಲ್ಲಾ‘ಗೆ ನೀಡಿರುವ ಸಂದರ್ಶನದಲ್ಲಿ ರಾಜ್‌ ಕುಂದ್ರ ಸ್ಪಷ್ಟನೆ ನೀಡಿದ್ದು, ಕವಿತಾ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ. 

ಇದನ್ನೂ ಓದಿ: ಶಿಲ್ಪಾ ಶೆಟ್ಟಿಗೆ ಜನ್ಮದಿನದ ಸಂಭ್ರಮ: ರಾಜ್‌ ಕುಂದ್ರಾ ಶುಭಾಶಯ ಕೋರಿದ ಪರಿ ಇದು..

ಶಿಲ್ಪಾ ಶೆಟ್ಟಿ ಅವರನ್ನು ವಿವಾಹವಾಗುವುದಕ್ಕೂ ಮುಂಚೆ ರಾಜ್‌ ಕುಂದ್ರ ಕವಿತಾರನ್ನು ಮದುವೆಯಾಗಿ ಲಂಡನ್‌ನಲ್ಲಿ ನೆಲೆಸಿದ್ದರು. ಕವಿತಾಗೆ 2006ರಲ್ಲಿ ವಿಚ್ಛೇದನ ನೀಡಿ 2009ರಲ್ಲಿ ಶಿಲ್ಪಾ ಶೆಟ್ಟಿಯನ್ನು ಮದುವೆಯಾದರು. 

ಕವಿತಾ ಆರೋಪದ ಬಗ್ಗೆ ಮಾತನಾಡಿರುವ ರಾಜ್‌ ಕುಂದ್ರ, ಕವಿತಾ ಹಣಕ್ಕಾಗಿ ಆತ್ಮವನ್ನೇ ಮಾರಿಕೊಂಡಿದ್ದಾರೆ ಎಂದು  ಹೇಳಿದ್ದಾರೆ. ಆ ವಿಡಿಯೊ ಸಂದರ್ಶನಕ್ಕಾಗಿ ಕವಿತಾ ಸಾಕಷ್ಟು ಹಣವನ್ನು ಪಡೆದಿದ್ದಾರೆ. ಈ ಬಗ್ಗೆ ಪತ್ರಿಕೆಗಳು ಬ್ಯಾಂಕ್‌ ದಾಖಲೆಗಳ ಸಮೇತ ವರದಿ ಮಾಡಿರುವುದು ಎಲ್ಲರಿಗೂ ತಿಳಿದಿದೆ ಎಂದು ರಾಜ್‌ ಕುಂದ್ರ ಹೇಳಿದ್ದಾರೆ.

ನಾವು ಲಂಡನ್‌ನಲ್ಲಿ ನೆಲೆಸಿದ್ದಾಗ ಕವಿತಾ ಸದಾ ನಮ್ಮ ಮನೆಯವರ ಜೊತೆ ಜಗಳ ಮಾಡುತ್ತಿದ್ದಳು. ಅಲ್ಲದೇ ನನ್ನ ತಂಗಿಯ ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ರಾಜ್‌ ಕುಂದ್ರಾ ಆರೋಪಿಸಿದ್ದಾರೆ. ಅದು ಮುಗಿದು ಹೋದ ಕಥೆ, ಈಗ ಆರೋಪ ಮಾಡುವುದರಲ್ಲಿ ಯಾವ ಅರ್ಥವಿದೆ? ಪ್ರಚಾರ ಹಾಗೂ ಹಣಕ್ಕಾಗಿ ಕವಿತಾ ಈ ರೀತಿ ಮಾಡುತ್ತಿದ್ದಾರೆ ಎಂದು ರಾಜ್‌ ಕುಂದ್ರ ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು