ರಜನಿಕಾಂತ್, ಅಮೀರ್ ಖಾನ್, ನಾಗಾರ್ಜುನ, ಉಪೇಂದ್ರ ಸೇರಿದಂತೆ ಬಹುಭಾಷಾ ತಾರೆಗಳಿರುವ ‘ಕೂಲಿ’ ಚಿತ್ರ ಇಂದು (ಆ.14) ತೆರೆ ಕಾಣುತ್ತಿದೆ. ಇತ್ತೀಚೆಗಷ್ಟೇ ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮ ನಡೆದಿದ್ದು, ಕನ್ನಡ ನಟ, ನಿರ್ದೇಶಕ ಉಪೇಂದ್ರ ಕುರಿತು ರಜನಿಕಾಂತ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ರಜನಿಕಾಂತ್ ಚಿತ್ರಗಳೆಂದರೆ ಮೊದಲಿನಿಂದಲೂ ಅಭಿಮಾನಿಗಳಿಗೆ ಹಬ್ಬದ ವಾತಾವರಣ. ತಮಿಳುನಾಡು ಮಾತ್ರವಲ್ಲದೇ ಕರ್ನಾಟಕದಲ್ಲಿಯೂ ಅವರ ಅಭಿಮಾನಿಗಳ ಕ್ರೇಜ್ ಹೆಚ್ಚಿದೆ. ಸದ್ಯ ಅವರ ‘ಕೂಲಿ’ ಚಿತ್ರದ ಅಬ್ಬರ ಜೋರಾಗಿದೆ. ಇದರಲ್ಲಿ ನಟಿಸಿರುವ ಕನ್ನಡದ ನಟ, ನಿರ್ದೇಶಕ ಉಪೇಂದ್ರ ಗಮನ ಸೆಳೆಯುತ್ತಿದ್ದಾರೆ. ‘ಎ’, ‘ಓಂ’ನಂಥ ವಿಭಿನ್ನ ಚಿತ್ರಗಳನ್ನು ನೀಡಿರುವ ಉಪೇಂದ್ರ ಈ ತಲೆಮಾರಿನ ಅದೆಷ್ಟೋ ನಿರ್ದೇಶಕರಿಗೆ ಪ್ರೇರಣೆ, ಸ್ಫೂರ್ತಿ. ‘ಕೂಲಿ’ ನಿರ್ದೇಶಕ ಲೋಕೇಶ್ ಕನಗರಾಜ್, ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಮೊದಲಾದವರು ಉಪೇಂದ್ರ ಕುರಿತು ಈ ಹಿಂದೆ ಮೆಚ್ಚುಗೆ ಮಾತುಗಳನ್ನಾಡಿದ್ದರು. ಇದೀಗ ರಜನಿಕಾಂತ್ ಕೂಡ ಉಪೇಂದ್ರ ಅವರೊಳಗಿನ ನಿರ್ದೇಶಕನನ್ನು ಶ್ಲಾಘಿಸಿದ್ದಾರೆ.

‘ಭಾರತದಲ್ಲಿರುವ ಅತ್ಯಂತ ಪ್ರತಿಭಾನ್ವಿತ ನಿರ್ದೇಶಕರುಗಳಿಗೆ ಸ್ಫೂರ್ತಿ ಉಪೇಂದ್ರ. ಕನ್ನಡ ಚಿತ್ರರಂಗದವರಷ್ಟೇ ಅಲ್ಲ ಹಿಂದಿ, ತೆಲುಗು ಮಲಯಾಳ, ತಮಿಳು ಸಿನಿಮಾ ಮಂದಿಯೂ ಉಪೇಂದ್ರರಿಂದ ಸಾಕಷ್ಟು ಕಲಿತಿದ್ದಾರೆ. ಉಪೇಂದ್ರ ನಟರಾಗಿ ಅಲ್ಲ, ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದವರು. ಉಪೇಂದ್ರ ನಟನೆಗಿಂತ ನಿರ್ದೇಶನ ನನಗೆ ಹೆಚ್ಚು ಇಷ್ಟ. ಅವರು ಶಿವರಾಜ್ಕುಮಾರ್ ಜೊತೆ ‘ಓಂ’ ಸಿನಿಮಾ ಮಾಡಿದ್ದರು. ನಮಗೆ ಇಲ್ಲಿ ಹೇಗೆ ‘ಬಾಷಾ’ ಚಿತ್ರವೋ, ಅಲ್ಲಿ ‘ಓಂ’. ಈ ಸಿನಿಮಾ ನನ್ನ ‘ಬಾಷಾ’ ಚಿತ್ರಕ್ಕಿಂತ ಹತ್ತು ಪಟ್ಟು ಉತ್ತಮ ಸಿನಿಮಾ. ಈಗ ಲೋಕೇಶ್ ಕನಗರಾಜ್ ಮಾಡುತ್ತಿರುವ ನಾನ್ಲೀನಿಯರ್ ಸಿನಿಮಾಗಳನ್ನು ಉಪೇಂದ್ರ ಆಗಲೇ ಮಾಡಿಬಿಟ್ಟಿದ್ದಾರೆ’ ಎಂದು ರಜನಿಕಾಂತ್ ಶ್ಲಾಘಿಸಿದ್ದಾರೆ.

ರಜನಿ ಎಂಬ ದ್ರೋಣಾಚಾರ್ಯ

ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ, ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿಯೇ ಮಾತು ಪ್ರಾರಂಭಿಸಿದರು. ‘25 ವರ್ಷಗಳ ಹಿಂದೆ ನಾನು ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದೆ. ಅದು ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ಕ್ಷಣ. ಏಕಲವ್ಯ ಹೇಗೆ ದ್ರೋಣಾಚಾರ್ಯರನ್ನು ಅನುಸರಿಸಿದನೋ ಹಾಗೆಯೇ ನಾನು ರಜನಿ ಅವರನ್ನು ಅನುಸರಿಸುತ್ತಾ ಬಂದಿದ್ದೀನಿ. ಬಾಲಿವುಡ್, ಹಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್ ಎಲ್ಲ ಚಿತ್ರರಂಗದಲ್ಲಿಯೂ ಸ್ಟಾರ್ ನಟರು ಇದ್ದಾರೆ. ಆದರೆ ಆ ಎಲ್ಲ ಸ್ಟಾರ್ ನಟರೂ ಕೂಡ ಮೊದಲ ದಿನ ಮೊದಲ ಶೋ ನೋಡುವುದು ರಜನಿಕಾಂತ್ ಸಿನಿಮಾವನ್ನು. ಆ ದ್ರೋಣಾಚಾರ್ಯ, ಏಕಲವ್ಯನಿಂದ ಬೆರಳು ತೆಗೆದುಕೊಂಡ. ಆದರೆ ರಜನಿಕಾಂತ್, ಈ ಏಕಲವ್ಯನ ಬೆರಳು ಹಿಡಿದು ‘ಕೂಲಿ’ ಎಂಬ ಪ್ರಪಂಚಕ್ಕೆ ಕರೆದುಕೊಂಡು ಬಂದರು’ ಎಂದಿದ್ದಾರೆ ಉಪೇಂದ್ರ.

‘ಅವರ ಪ್ರತಿ ವಿಡಿಯೊವನ್ನು ಹತ್ತಿಪ್ಪತ್ತು ಬಾರಿ ನೋಡುತ್ತಲೇ ಇರುತ್ತೀನಿ. ಅದು ಮನೋರಂಜನೆಗಾಗಿ ಅಲ್ಲ, ಬದಲಿಗೆ ಜ್ಞಾನೋದಯಕ್ಕಾಗಿ. ‘ಕೂಲಿ’ ಸಿನಿಮಾ ಪ್ರೇಮಿಗಳಿಗೆ ಹಬ್ಬವಿದ್ದಂತೆ’ ಎಂದು ಹೇಳಿದರು.

ದಕ್ಷಿಣ ಭಾರತದ ಹಲವು ಪ್ರಮುಖ ನಗರಗಳಲ್ಲಿ ಮೊದಲ ದಿನದ ಬಹುತೇಕ ಶೋಗಳು ಹೌಸ್ಫುಲ್ ಆಗಿವೆ. ಕೆಲ ಕಂಪನಿಗಳು ‘ಕೂಲಿ’ ಚಿತ್ರಕ್ಕಾಗಿ ರಜೆಯನ್ನೂ ಘೋಷಿಸಿವೆ. ತಮಿಳುನಾಡಿನಲ್ಲಿ ಟಿಕೆಟ್ ದರ ಉಳಿದ ಕಡೆಗಳಿಂತ ತುಸು ಕಡಿಮೆ ಇದೆ. ಕರ್ನಾಟಕದಲ್ಲಿ ಜಯಣ್ಣ ಫಿಲ್ಮ್ಸ್ ಸಿನಿಮಾ ವಿತರಣೆ ಹಕ್ಕು ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಟಿಕೆಟ್ ದರ ₹150ರಿಂದ ₹1000 ತನಕವಿದೆ. ಏಕಪರದೆ ಚಿತ್ರಮಂದಿರಗಳು ಕೂಡ ₹400–₹500ಗೆ ಟಿಕೆಟ್ ಮಾರಾಟ ಮಾಡುತ್ತಿವೆ. ‘200ಕ್ಕೂ ಹೆಚ್ಚು ಏಕಪರದೆ ಚಿತ್ರಮಂದಿರಗಳಲ್ಲಿ 800ಕ್ಕೂ ಅಧಿಕ ಶೋಗಳಿವೆ. ಮಲ್ಟಿಫ್ಲೆಕ್ಸ್ ಪ್ರದರ್ಶನ ಸೇರಿ ರಾಜ್ಯದಲ್ಲಿ 2000ಕ್ಕೂ ಸ್ಕ್ರೀನ್ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ’ ಎಂದಿದ್ದಾರೆ ವಿತರಕ ಜಯಣ್ಣ.

2000 ಪ್ರದರ್ಶನ:

ದಕ್ಷಿಣ ಭಾರತದ ಹಲವು ಪ್ರಮುಖ ನಗರಗಳಲ್ಲಿ ಮೊದಲ ದಿನದ ಬಹುತೇಕ ಶೋಗಳು ಹೌಸ್ಫುಲ್ ಆಗಿವೆ. ಕೆಲ ಕಂಪನಿಗಳು ‘ಕೂಲಿ’ ಚಿತ್ರಕ್ಕಾಗಿ ರಜೆಯನ್ನೂ ಘೋಷಿಸಿವೆ. ತಮಿಳುನಾಡಿನಲ್ಲಿ ಟಿಕೆಟ್ ದರ ಉಳಿದ ಕಡೆಗಳಿಂತ ತುಸು ಕಡಿಮೆ ಇದೆ. ಕರ್ನಾಟಕದಲ್ಲಿ ಜಯಣ್ಣ ಫಿಲ್ಮ್ಸ್ ಸಿನಿಮಾ ವಿತರಣೆ ಹಕ್ಕು ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಟಿಕೆಟ್ ದರ ₹150ರಿಂದ ₹1000 ತನಕವಿದೆ. ಏಕಪರದೆ ಚಿತ್ರಮಂದಿರಗಳು ಕೂಡ ₹400–₹500ಗೆ ಟಿಕೆಟ್ ಮಾರಾಟ ಮಾಡುತ್ತಿವೆ. ‘200ಕ್ಕೂ ಹೆಚ್ಚು ಏಕಪರದೆ ಚಿತ್ರಮಂದಿರಗಳಲ್ಲಿ 800ಕ್ಕೂ ಅಧಿಕ ಶೋಗಳಿವೆ. ಮಲ್ಟಿಫ್ಲೆಕ್ಸ್ ಪ್ರದರ್ಶನ ಸೇರಿ ರಾಜ್ಯದಲ್ಲಿ 2000ಕ್ಕೂ ಸ್ಕ್ರೀನ್ಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ’ ಎಂದಿದೆ ವಿತರಣ ಸಂಸ್ಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.