ಅಣ್ಣಾತೆ ಸಿನಿಮಾದಲ್ಲಿ ನಟ ರಜನಿಕಾಂತ್‌ಗಾಗಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕೊನೆಯ ಹಾಡು ಬಿಡುಗಡೆ ಆಗಿದೆ.
ಭಾವುಕವಾಗಿ ಟ್ವೀಟ್ ಮಾಡಿರುವ ರಜನಿಕಾಂತ್, 'ಕಳೆದ 45 ವರ್ಷಗಳಿಂದ ಎಸ್‌ಪಿಬಿ ಧ್ವನಿ ನನ್ನ ಪಾತ್ರಗಳಿಗೆ ಜೀವ ತುಂಬಿದೆ. 'ಅಣ್ಣಾತೆ' ಸಿನಿಮಾಕ್ಕಾಗಿ ಅವರುಹಾಡಿರುವುದು ಕೊನೆಯ ಹಾಡಾಗಿದೆ. ನನ್ನ ಪ್ರೀತಿಯ ಎಸ್‌ಪಿಬಿ ಧ್ವನಿಯ ಮೂಲಕ ಜೀವಂತವಾಗಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.
ಎಸ್‌ಪಿಬಿ ಹಾಡಿರುವ ಜೋಷ್ ಭರಿತ ಈ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.ವಿವೇಕ್ ಸಾಹಿತ್ಯ ಬರೆದಿರುವ ಈ ಹಾಡಿಗೆ ಇಮಾನ್ ರಾಗ ಸಂಯೋಜನೆ ಮಾಡಿದ್ದಾರೆ.
ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದಾರೆ.ಖುಷ್ಬೂ ನಯನತಾರಾ, ಕೀರ್ತಿ ಸುರೇಶ್, ಮೀನಾ, ಪ್ರಕಾಶ್ ರೈ, ಜಗಪತಿ ಬಾಬು ಸೇರಿದಂತೆ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಸಂಕ್ರಾಂತಿಗೆ ಅಣ್ಣಾತೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.