ಬುಧವಾರ, ಅಕ್ಟೋಬರ್ 5, 2022
26 °C

ವಂಚನೆ ಪ್ರಕರಣ: ನಟ ರಜನೀಕಾಂತ್ ಪತ್ನಿ ಲತಾ ನಿರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ’ಕೊಚ್ಚಾಡಿಯನ್‘ ಸಿನಿಮಾದ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ನಟ ರಜನೀಕಾಂತ್ ಪತ್ನಿ ಲತಾ ವಿರುದ್ಧದ ನಾಲ್ಕು ಆರೋಪಗಳಲ್ಲಿ ಮೂರು ಆರೋಪಗಳನ್ನು ಹೈಕೋರ್ಟ್ ರದ್ದುಪಡಿಸಿದೆ.

ಫೋರ್ಜರಿ (ಖೊಟ್ಟಿ ದಾಖಲೆ ಸೃಷ್ಟಿ) ಪ್ರಕರಣದ ವಿಚಾರಣೆ ಮುಂದುವರಿಸಿ ಕಾನೂನು ಪ್ರಕಾರ ವಿಲೇವಾರಿ ಮಾಡುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ನಿರ್ದೇಶಿಸಿದೆ.

ಈ ಸಂಬಂಧ ಲತಾ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿದ್ದು, ಈ ಕುರಿತಂತೆ ಇದೇ 2ರಂದು ಆದೇಶಿಸಿದೆ.

ಲತಾ ವಿರುದ್ಧದ ಐಪಿಸಿ ಕಲಂ 196, 199 ಮತ್ತು 420 ರ (ಸುಳ್ಳು ಎಂದು ತಿಳಿದಿರುವ ಪುರಾವೆಗಳನ್ನು ಬಳಸುವುದು, ಸುಳ್ಳು ಹೇಳಿಕೆ ನೀಡುವುದು ಮತ್ತು ವಂಚನೆ ಮಾಡುವುದು) ಅಡಿ ದಾಖಲಾದ ಪ್ರಕರಣಗಳನ್ನು ನ್ಯಾಯಪೀಠ ರದ್ದುಗೊಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು