ಚಂಡೀಗಡದಲ್ಲಿ ಪತ್ರಲೇಖಾರನ್ನು ಮದುವೆಯಾಗಲಿದ್ದಾರೆ ರಾಜ್‌ಕುಮಾರ್ ರಾವ್

ಬೆಂಗಳೂರು: ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಅವರು ತಮ್ಮ ಬಹುಕಾಲದ ಗೆಳತಿ ಪತ್ರಲೇಖಾರನ್ನು ಚಂಡೀಗಡದಲ್ಲಿ ವಿವಾಹವಾಗುತ್ತಿದ್ದಾರೆ.
ಕುಟುಂಬದ ಆಪ್ತರು ಮತ್ತು ಬಾಲಿವುಡ್‌ನ ಗೆಳೆಯರು, ಬಂಧುಗಳ ಸಮ್ಮುಖದಲ್ಲಿ ರಾಜ್‌ಕುಮಾರ್-ಪತ್ರಲೇಖಾ ಅವರ ಮದುವೆ ನಡೆಯಲಿದೆ ಎಂದು ಇಂಗ್ಲಿಷ್ ದೈನಿಕ ವರದಿ ಮಾಡಿದೆ.
ಬಾಲಿವುಡ್‌ನ ತಾರಾ ದಂಪತಿ ತಮ್ಮ ಮದುವೆಯನ್ನು ತೀರಾ ಆಪ್ತರ ಸಮಕ್ಷಮದಲ್ಲಿ ಖಾಸಗಿಯಾಗಿ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಕೆಲವೇ ಸಂಖ್ಯೆಯ ಅತಿಥಿಗಳು ಮಾತ್ರವೇ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ವರದಿ ಹೇಳಿದೆ.
ಜಾಹೀರಾತು ಒಂದರಲ್ಲಿ ಪತ್ರಲೇಖಾ ಅವರನ್ನು ನೋಡಿದ್ದ ರಾಜ್‌ಕುಮಾರ್, ನಿಜಜೀವನದಲ್ಲಿ ನಟಿಯನ್ನು ಭೇಟಿಯಾಗು ಬಯಸಿದ್ದರು. ಅದಾದ ಒಂದು ತಿಂಗಳ ಬಳಿಕ, ರಾಜ್‌ಕುಮಾರ್ ಪತ್ರಲೇಖಾರನ್ನು ಭೇಟಿಯಾಗಿದ್ದರು.
ಪೊಲೀಸ್ ಸಹಾಯವಾಣಿ '100' ನನ್ನ ಹೊಸ ಚಿತ್ರದ ಹೆಸರು: ನಟ ರಮೇಶ ಅರವಿಂದ್
ರಾಜ್‌ಕುಮಾರ್ ಮತ್ತು ಪತ್ರಲೇಖಾ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. 2014ರಲ್ಲಿ ‘ಸಿಟಿಲೈಟ್ಸ್’ ಬಾಲಿವುಡ್ ಚಿತ್ರದಲ್ಲಿ ಇಬ್ಬರೂ ಜತೆಯಾಗಿ ಕಾಣಿಸಿಕೊಂಡಿದ್ದರು.
ಸದ್ದು ಮಾಡುತ್ತಿದೆ ಪಲಾಕ್ ತಿವಾರಿಯ 'ಬಿಜಿಲಿ...ಬಿಜಿಲಿ' ವಿಡಿಯೊ ಸಾಂಗ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.