ಮಂಗಳವಾರ, ಜನವರಿ 31, 2023
27 °C

ರಾಜನೀತಿ ಸೀಕ್ವೆಲ್‌ನಲ್ಲೂ ಭಾಗ 1ರ ಪಾತ್ರವರ್ಗ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2010ರಲ್ಲಿ ಬಿಡುಗಡೆಯಾದ ರಾಜಕೀಯ ಹಿನ್ನೆಲೆಯು‌ಳ್ಳ ಚಿತ್ರ ‘ರಾಜನೀತಿ’ ಸಿನಿಮಾದ ಸೀಕ್ವೆಲ್ ಮಾಡುವುದಾಗಿ ತಿಳಿಸಿದ್ದಾರೆ ನಿರ್ದೇಶಕ ಪ್ರಕಾಶ್‌ ಝಾ. ಅಲ್ಲದೇ ರಾಜನೀತಿಯ ಪಾತ್ರವರ್ಗವೇ ಸೀಕ್ವೆಲ್‌ನಲ್ಲೂ ಮುಂದುವರಿಯಲಿದೆ ಎಂಬ ಮಾತು ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ. 

ರಾಜನೀತಿ ಸಿನಿಮಾವೂ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು. ಅಲ್ಲದೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. 2010ರ ಅತೀ ದೊಡ್ಡ ಯಶಸ್ಸಿನ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು ಈ ಸಿನಿಮಾ. ಆ ಕಾರಣಕ್ಕೆ ಈಗ ಸೀಕ್ವೆಲ್ ಮಾಡುವ ಯೋಚನೆ ಮಾಡಿದ್ದಾರೆ ಝಾ. 

ಈ ಕುರಿತು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಝಾ ‘ರಾಜನೀತಿ ಸೀಕ್ವೆಲ್ ಕುರಿತ ಸ್ಕ್ರಿಪ್ಟ್ ಈಗಾಗಲೇ ನನ್ನ ತಲೆಯಲ್ಲಿದೆ. ಈ ವಿಷಯ ನನ್ನ ತಲೆಯನ್ನು ಹೊಕ್ಕು ಬಹಳ ಸಮಯವಾಯ್ತು. ನಮ್ಮ ತಂಡ ಸೀಕ್ವೆಲ್ ಮೇಲೆ ಕೆಲಸ ಮಾಡುತ್ತಿದೆ. ಸಿನಿಮಾ ಕುರಿತ ವಿನ್ಯಾಸವು ತಯಾರಿದೆ.ಈ ವಿಷಯವನ್ನು ಅಧೀಕೃತವಾಗಿ ತಿಳಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇನೆ.’ ಎಂದಿದ್ದಾರೆ. 

ಈ ಎಲ್ಲದರ ಜೊತೆಗೆ ನಾನಾ ಪಾಟೇಕರ್‌, ಅರ್ಜುನ್ ರಾಮ್‌ಪಾಲ್‌, ಅಜಯ್ ದೇವಗನ್‌, ರಣಬೀರ್ ಕಪೂರ್‌, ಮನೋಜ್ ಬಾಜಪೇಯಿ ಹಾಗೂ ಕತ್ರಿನಾ ಕೈಫ್ ಸೇರಿದಂತೆ ರಾಜನೀತಿ ಭಾಗ 1 ರಲ್ಲಿ ನಟಿಸಿರುವ ಪಾತ್ರವರ್ಗವೇ ಭಾಗ 2 ರಲ್ಲೂ ಮುಂದುವರಿಯಲಿದೆ ಎಂಬ ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ. 

ರಾಜನೀತಿ ಸಿನಿಮಾವು ಕುಟುಂಬದೊಳಗೆ ನಡೆದ ಕರಾಳ ರಾಜಕೀಯದ ಕತೆಯನ್ನು ಒಳಗೊಂಡಿತ್ತು.

ಇತ್ತೀಚೆಗೆ ಝಾ ನಿರ್ದೇಶನದ ‘ಆಶ್ರಮ್‌’ ವೆಬ್‌ಸರಣಿ ಕೂಡ ಯಶಸ್ಸು ಕಂಡಿದೆ. ಬಾಬ್ಬಿ ಡಿಯೊಲ್ ಇದರಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು