ಭಾನುವಾರ, ನವೆಂಬರ್ 27, 2022
23 °C

ನಾಳೆ ರಾಖಿಯೂ..! ಮಥುರಾದಿಂದ ಕಂಗನಾ ಸ್ಪರ್ಧಿಸುವ ಬಗ್ಗೆ ಹೇಮಾಮಾಲಿನಿ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಥುರಾ: ತಮ್ಮ ತೀಕ್ಷ್ಣ ಟೀಕೆಗಳ ಮೂಲಕ ಆಗಾಗ್ಗೆ ಚರ್ಚೆಯಾಗುವ ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರು ಉತ್ತರ ಪ್ರದೇಶದ ಮಥುರಾದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ  ಗುಲ್ಲು ಉತ್ತರ ಪ್ರದೇಶದಲ್ಲಿ ಮನೆ ಮಾಡಿದೆ. 

ಈ ಮಧ್ಯೆ ಮಥುರಾಕ್ಕೆ ಭೇಟಿ ನೀಡಿದ್ದ ಹಿರಿಯ ನಟಿ, ಮಥುರಾ ಸಂಸದೆ ಹೇಮಮಾಲಿನಿ ಅವರು ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

“ನಾನು ಏನು ಹೇಳಬೇಕು… ಅದರ ಬಗ್ಗೆ ನನ್ನದೇನಿದೆ ಅಭಿಪ್ರಾಯ? ಅದೆಲ್ಲ ದೇವರ ಇಚ್ಚೆ. ಶ್ರೀಕೃಷ್ಣ ಅದನ್ನು ನಿರ್ಧರಿಸುತ್ತಾನೆ’ ಎಂದು ಮೊದಲಿಗೆ ಹೇಳಿದ್ದಾರೆ. 

ನಂತರ ಅಸಮಾಧಾನದಿಂದ ಹೇಮಾ ಅವರು,  ‘ಒಳ್ಳೆಯದು, ತುಂಬಾ ಒಳ್ಳೆಯದು... ‘ಹಾಗಾದರೆ ನೀವು ಸ್ಥಳೀಯರನ್ನು ಪರಿಗಣಿಸುವುದಿಲ್ಲ... ನಾಳೆ ರಾಖಿ ಸಾವಂತ್ ಕೂಡ (ಚುನಾವಣೆಗೆ ಸ್ಪರ್ಧಿಸುತ್ತಾರೆ). ಮಥುರಾದಲ್ಲಿ ನಿಮಗೆ ಚಲನಚಿತ್ರ ತಾರೆಯರು ಮಾತ್ರ ಬೇಕೇ?’ ಎಂದು ಅಸಮಾಧಾನದಿಂದ ಹೇಳಿದ್ದಾರೆ. 

ಈ ವಾರದ ಆರಂಭದಲ್ಲಿ  ಕಂಗನಾ ತಮ್ಮ ಕುಟುಂಬದೊಂದಿಗೆ ಮಥುರಾದ ಬೃಂದಾವನದಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು