ವೆಂಕಟ್ ಭಾರಧ್ವಾಜ್ ನಿರ್ದೇಶನದ ‘ರಕ್ಕಿ’ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆದಿದ್ದು, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಸಾಲಿಗ್ರಾಮದ ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಸುರೇಶ್ ಅವರ ಪುತ್ರ ರಕ್ಕಿ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ಆ್ಯಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಿರ್ಮಿಸಿರುವ ಸೆಟ್ನಲ್ಲೇ ನಡೆಯಲಿದೆ. ‘ರಕ್ಕಿ’ ಪಟಾಕಿಯ ಹಾಗೆ. ನಾಯಕ ವ್ಯಕ್ತಿತ್ವ ಈ ರೀತಿ ಇದೆ ಎಂದಿದೆ ಚಿತ್ರತಂಡ. ಆಶಿಕಾ ಸೋಮಶೇಖರ್, ಪಲ್ಲವಿ ಮಂಜುನಾಥ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಬಿ.ಸುರೇಶ್, ಹರಿಣಿ ಶ್ರೀಕಾಂತ್, ಸುಂದರ್ ರಾಜ್, ರಮೇಶ್ ಪಂಡಿತ್, ಸಂಪತ್ ಮೈತ್ರೇಯ, ಗಂಟೆ ಗೋವಿಂದ ಮುಂತಾದವರು ತಾರಾಬಳಗದಲ್ಲಿರಲಿದ್ದಾರೆ. ಲೋಕಿ ತವಸ್ಯ ಸಂಗೀತ ನಿರ್ದೇಶನ, ಐಸ್ಸಾಕ್ ಪ್ರಭಾಕರ್ ಛಾಯಾಚಿತ್ರಗ್ರಹಣ, ದೀಪು ಎಸ್.ಕುಮಾರ್ ಸಂಕಲನ ಚಿತ್ರಕ್ಕಿರಲಿದೆ.

‘ನಾನು ಐಟಿ ಉದ್ಯೋಗಿ. ಇಪ್ಪತ್ತು ವರ್ಷಗಳಿಂದ ಜರ್ಮನ್ನಲ್ಲೇ ವಾಸಿಸುತ್ತಿದ್ದೇನೆ. ನನ್ನ ತಂದೆ ರಾಜಶೇಖರ್ ಅವರು ರಾಜ್ಕುಮಾರ್ ಅವರು ಅಭಿನಯಿಸಿದ್ದ ‘ಹೊಸಬೆಳಕು’ ಚಿತ್ರ ನಿರ್ಮಾಣ ಮಾಡಿದ್ದರು. ನಿರ್ದೇಶಕ ವೆಂಕಟ್ ಭಾರದ್ವಾಜ್ ಎರಡು ಕಥೆ ಸಿದ್ಧಮಾಡಿಕೊಂಡಿದ್ದರು. ನಮ್ಮ ಕುಟುಂಬದ ಸ್ನೇಹಿತರಾದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಒಪ್ಪಿದ ಕಥೆ ಈಗ ಸಿನಿಮಾವಾಗುತ್ತಿದೆ’ ಎಂದರು ಸುರೇಶ್. ಚಿತ್ರದಲ್ಲಿ ‘ಡ್ಯಾನಿ’ ಎಂಬ ಹೆಸರಿನ ಭೂಗತಲೋಕದ ದೊರೆಯಾಗಿ ಬಿ.ಸುರೇಶ್ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.