ಮಂಗಳವಾರ, ಆಗಸ್ಟ್ 9, 2022
23 °C
ಜುಲೈ 15 ರಂದು ತೆರೆ ಕಾಣಲಿದೆ ಸಿನಿಮಾ

ಸಾಯಿ ಪಲ್ಲವಿ ‘ಗಾರ್ಗಿ’ಗೆ ರಕ್ಷಿತ್‌ ಶೆಟ್ಟಿ ಸಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಂವಃ ಪಿಕ್ಚರ್ಸ್‌ ಮೂಲಕ ನಟ ರಕ್ಷಿತ್‌ ಶೆಟ್ಟಿ ಅದ್ಭುತ ಕಥೆಯುಳ್ಳ ಸಿನಿಮಾಗಳನ್ನು ಪ್ರೇಕ್ಷಕರೆದುರಿಗೆ ಇರಿಸುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಬಹುಭಾಷಾ ನಟಿ ಸಾಯಿ ಪಲ್ಲವಿ ಅಭಿನಯದ ಸಿನಿಮಾ ‘ಗಾರ್ಗಿ’. ರಕ್ಷಿತ್‌, ತಮ್ಮ ಸಂಸ್ಥೆಯ ಮೂಲಕ ಗಾರ್ಗಿ ಸಿನಿಮಾದ ಕನ್ನಡ ಅವತರಣಿಕೆಯನ್ನು ಪ್ರಸ್ತುತಪಡಿಸಲಿದ್ದಾರೆ. 

ಸಿನಿಮಾ, ಜುಲೈ 15ರಂದು ತೆರೆಕಾಣುತ್ತಿದ್ದು, ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಈ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಗೌತಮ್ ರಾಮಚಂದ್ರನ್ ನಿರ್ದೇಶನದ ಈ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿದ್ದು, ಕನ್ನಡ ಹಾಗೂ ತೆಲುಗಿಗೆ ಡಬ್ ಆಗಿದೆ. ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮೀ, ಥಾಮಸ್ ಜಾರ್ಜ್ ಹಾಗೂ ಗೌತಮ್ ರಾಮಚಂದ್ರನ್ ನಿರ್ಮಿಸಿರುವ ಈ ಚಿತ್ರಕ್ಕೆ ಗೋಗಿಂದ್ ವಸಂತ ಸಂಗೀತ ನೀಡಿದ್ದಾರೆ. ಸಾಯಿಪಲ್ಲವಿ, ಕಾಳಿ ವೆಂಕಟ್, ಸರವಣನ್, ಜಯಪ್ರಕಾಶ್, ಆರ್. ಎಸ್. ಶಿವಾಜಿ, ಲಿವಿಂಗ್ ಸ್ಟನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌.

ಚಿತ್ರದ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ರಕ್ಷಿತ್‌, ‘ಗೌತಮ್‌ ನನ್ನ ಸ್ನೇಹಿತ. ನಾವು ಭೇಟಿಯಾದಾಗ ಸಿನಿಮಾ ಕುರಿತು ಮತ್ತು ಕಥೆಗಳ ಕುರಿತು ಮಾತನಾಡುವುದೇ ಹೆಚ್ಚು. ಗಾರ್ಗಿ ಸಿನಿಮಾ ಮೂಡಿಬಂದಿರುವ ರೀತಿ, ಈ ಚಿತ್ರವನ್ನು ಕನ್ನಡದಲ್ಲಿ ಪ್ರಸ್ತುತಪಡಿಸುವ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿತು. ಸಾಯಿ ಪಲ್ಲವಿ ಅವರು ಈ ಚಿತ್ರದಲ್ಲಿ ಮುಖ್ಯಪಾತ್ರ ವಹಿಸಿರುವುದು ಮತ್ತೊಂದು ಬಲವಾದ ಕಾರಣ ಎನ್ನಬಹುದು.

ಓದಿ: ಮತ್ತೆ ಒಂದಾದ ಪ್ರಭಾಸ್ –ಅನುಷ್ಕಾ: ಬಾಹುಬಲಿ ಜೋಡಿಯಿಂದ ಸಿಕ್ತು ಸಿಹಿ ಸುದ್ದಿ

ರಾಜ್‌ ಬಿ.ಶೆಟ್ಟಿ ನಿರ್ದೇಶನದ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬಳಿಕ, ‘ಗಾರ್ಗಿ’ ನನ್ನ ಹೃದಯ ಕದಲಿಸಿದ ಸಿನಿಮಾ ಎಂದರೆ ತಪ್ಪಾಗಲಾರದು. ಸಾಯಿ ಪಲ್ಲವಿ ಅವರು ಪಾತ್ರವನ್ನು ಜೀವಿಸಿ ನಿಜ ಜೀವನಕ್ಕೆ ಹತ್ತಿರವಿದೆ ಎನಿಸುವಂತೆ ಇಲ್ಲಿ ನಟಿಸಿದ್ದಾರೆ. ನಮ್ಮ ಚಿತ್ರಗಳನ್ನು ನಾವು ಬೇರೆ ಭಾಷೆ ಮತ್ತು ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲು ಧೈರ್ಯ ಮಾಡುತ್ತಿರುವಾಗ, ಬೇರೆ ಭಾಷೆಯ ಒಳ್ಳೆಯ ಸಿನಿಮಾಗಳನ್ನು ಇಲ್ಲಿಗೆ ತರುವುದು ನಮ್ಮ ಜವಾಬ್ದಾರಿ. ಗೌತಮ್‌ ಬೆಂಗಳೂರಿನವರೇ, ಜೊತೆಗೆ ಸಾಯಿ ಪಲ್ಲವಿ ಕನ್ನಡಕ್ಕೆ ತಮ್ಮ ಧ್ವನಿ ನೀಡಿರುವುದು ಹೆಮ್ಮೆಯ ವಿಚಾರ’ ಎಂದಿದ್ದಾರೆ.

ಓದಿ... 

ನಾನು ಪಿಸಿಒಎಸ್‌ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ: ನಟಿ ಶ್ರುತಿ ಹಾಸನ್

ಪ್ರಶಾಂತ್ ನೀಲ್ ನಿರ್ದೇಶನ: ಪ್ರಭಾಸ್ ಅಭಿನಯದ ‘ಸಲಾರ್’ನಲ್ಲಿ ಯಶ್ ಅತಿಥಿ ಪಾತ್ರ? 

‘ಲೈಗರ್‌’ ಹೊಸ ಪೋಸ್ಟರ್ ಬಿಡುಗಡೆ: ವಿಭಿನ್ನ ಅವತಾರದಲ್ಲಿ ವಿಜಯ್‌ ದೇವರಕೊಂಡ

Video | ಇಂಗ್ಲೆಂಡ್ ವಿರುದ್ಧ ಪಂತ್ ಶತಕ: ಡಗೌಟ್‌ನಲ್ಲಿ ರಾಹುಲ್ ದ್ರಾವಿಡ್ ಸಂಭ್ರಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು