ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಿತಾಗೆ ಆನೆಬಲ

Last Updated 27 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗಕ್ಕೆ ರಕ್ಷಿತಾ ಪ್ರವೇಶಿಸಿದ್ದಾರೆ.ರಕ್ಷಿತಾ ಎಂದಾಕ್ಷಣ ‘ಸುಂಟರಗಾಳಿ’ ಎಬ್ಬಿಸಿದ ‘ಕ್ರೇಜಿ ಕ್ವೀನ್‌’ ರಕ್ಷಿತಾ ಹೆಸರೇ ಎಲ್ಲರಿಗೂ ನೆನಪಾಗಬಹುದು. ಆದರೆ ಇವರು ‌ಅವರಲ್ಲ; ಇವರು 'ಆನೆಬಲ' ಚಿತ್ರದ ನಾಯಕಿ, ಹೊಸ ಪ್ರತಿಭೆ ಕೋಲಾರದ ರಕ್ಷಿತಾ. ಇದು ಅವರ ಚೊಚ್ಚಲ ಸಿನಿಮಾ ಕೂಡ ಹೌದು.

ಇವರು ಚಿತ್ರರಂಗಕ್ಕೆ ಆಕಸ್ಮಿಕವಾಗಿ ಬಂದಿದ್ದರೂ ಬಣ್ಣದ ಲೋಕದ‌ ಮೇಲಿನ ಸೆಳೆತ ಅವರನ್ನು ಕರೆತಂದಿದೆ. ಬಿಎಸ್‌ಸಿಯವರೆಗೆ ಓದಿರುವ ರಕ್ಷಿತಾಗೆಚಿತ್ರರಂಗದಯಾವುದೇ ಹಿನ್ನೆಲೆ ಇರಲಿಲ್ಲ. ‘ಈ ರಂಗಕ್ಕೆ ನಮ್ಮ ಕುಟುಂಬದಿಂದ ಕಾಲಿಟ್ಟವರಲ್ಲಿ ನಾನೇ ಮೊದಲ‌ ಕುಡಿ. ತಂದೆ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಪೋಲಿಸ್ ಸಬ್ ಇನ್ಸ್ ಪೆಕ್ಟರ್. ತಾಯಿ ಗೃಹಕೃತ್ಯ ನೋಡಿಕೊಳ್ಳುತ್ತಾರೆ. ನಮ್ಮ ಕುಟುಂಬ ಸದ್ಯ, ರಾಮನಗರದಲ್ಲಿ ನೆಲೆ ನಿಂತಿದೆ. ನನಗೆ ಓದು ಮುಂದುವರಿಸುವ ಜತೆಗೆ, ಚಿತ್ರರಂಗದಲ್ಲೇ ಬದುಕು ಕಟ್ಟಿಕೊಳ್ಳುವ ಅದಮ್ಯ ಉತ್ಸಾಹವಿದೆ’ ಎಂದು ಅವರು ಮಾತಿಗಿಳಿದರು.

‘ಆನೆಬಲ’ ಚಿತ್ರದ ನಿರ್ದೇಶಕಸೂನಗಹಳ್ಳಿ ರಾಜು ಅವರು ಆಡಿಷನ್‌ಗೆ ಕರೆದಿದ್ದಾಗ ನಟನೆ ಮತ್ತು ಸಂಭಾಷಣೆಕೌಶಲದ ಬಗ್ಗೆಒಂದು ನಿಮಿಷದ ವಿಡಿಯೋ ಮಾಡಿ ಅವರಿಗೆ ರಕ್ಷಿತಾ ಕಳುಹಿಸಿದ್ದರಂತೆ. ಆ ವಿಡಿಯೊ ನೋಡಿಯೇ ಇವರನ್ನು ಚಿತ್ರತಂಡ ನಾಯಕಿಯಾಗಿ ಆಯ್ಕೆಮಾಡಿತಂತೆ.

‘ಆನೆಬಲ’ದಲ್ಲಿ ನಿಭಾಯಿಸಿರುವ ಪಾತ್ರದ ಬಗ್ಗೆ ಮಾತು ಹೊರಳಿಸಿದ ಅವರು, ‘ನನ್ನ ಪಾತ್ರದ ಹೆಸರು ವಸುಂಧರಾ. ಎರಡು ಶೇಡ್‌ ಇದೆ. ಮೊದಲಾರ್ಧ ಹಳ್ಳಿಯ ಜಂಭದ ಹುಡುಗಿ, ದ್ವಿತಿಯಾರ್ಧದಲ್ಲಿ ತುಂಬಾ ಸಾಪ್ಟ್‌ ಆದ ಛಾಯೆ ಇದೆ. ಪಾತ್ರಕ್ಕಾಗಿ ಅಂತಹ ಪೂರ್ವ ತಯಾರಿಯನ್ನೇನು ಮಾಡಿಕೊಂಡಿರಲಿಲ್ಲ. ಪಾತ್ರ ಬಯಸಿದ ಅಭಿನಯವನ್ನುಚಿತ್ರೀಕರಣದ ಸೆಟ್‌ನಲ್ಲೇ ನೀಡಿದ್ದೇನೆ. ತರಗತಿಗೆ ಹೋಗಿ ನಾನು ನಟನೆ ಕಲಿತಿಲ್ಲ. ನಿರ್ದೇಶಕರಾಜು ಮತ್ತು ನಾಯಕ ನಟ ಸಾಗರ್‌ ಕೊಡುತ್ತಿದ್ದ ಟಿಪ್ಸ್‌ ಮತ್ತು ಮಾರ್ಗದರ್ಶನ ನಟನೆ, ಡೈಲಾಗ್‌ ಒಪ್ಪಿಸುವುದನ್ನು ನನಗೆ ನೀರು ಕುಡಿದಷ್ಟು ಸರಾಗಗೊಳಿಸಿತು’ಎನ್ನಲು ಮರೆಯಲಿಲ್ಲ.

‘ಆನೆಬಲದ’ ಮೇಲೆ ತುಂಬಾ ಭರವಸೆ ಇಡೀ ಚಿತ್ರತಂಡಕ್ಕೆ ಇದೆ. ಹಳ್ಳಿಸೊಗಡಿನ ಕಥೆ ಆಧರಿಸಿರುವ ಚಿತ್ರವಿದು. ಹಳ್ಳಿಗರ ನೋವುನಲಿವುಗಳನ್ನು ನೈಜವಾಗಿ ತೋರಿಸಲಾಗಿದೆ.ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿಬೆಳೆಸುವ ಬಗ್ಗೆಯೂ ಚಿತ್ರ ಮಾತನಾಡುತ್ತದೆ. ಹಾಗಾಗಿ ಜನರಿಗೆ ಇದು ಬೇಗ ಹತ್ತಿರವಾಗಲಿದೆ. ಚಿತ್ರ ನಮ್ಮೆಲ್ಲರಿಗೂ ಒಂದು ಹೊಸ ದಿಕ್ಕು ತೋರಿಸುತ್ತದೆ. ಒಂದಿಷ್ಟು ಅವಕಾಶಗಳನ್ನು ನಮಗಾಗಿ ಹೊತ್ತುತರಲಿದೆ ಎನ್ನುವ ಸಕಾರಾತ್ಮಕ ಭರವಸೆ ಹೊಂದಿದ್ದೇನೆ. ಭವಿಷ್ಯದಲ್ಲೂ ಸಂಪ್ರದಾಯಸ್ಥೆಯ ಪಾತ್ರಗಳನ್ನೇ ನಿರ್ವಹಿಸಲು ಇಷ್ಟಪಡುತ್ತೇನೆಎಂದರುರಕ್ಷಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT