ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಡೋಮ್ ಹಿಡಿದು ಬಂದ ನಟಿ ರಾಕುಲ್ ಪ್ರೀತ್ ಸಿಂಗ್!

Last Updated 13 ನವೆಂಬರ್ 2021, 8:48 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ನಲ್ಲಿ ಸದ್ಯ ಬಹುಬೇಡಿಕೆ ನಟಿಯಾಗಿ ಬೆಳೆಯುತ್ತಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಸಾಲು ಸಾಲು ಚಿತ್ರಗಳು ಅರಸಿ ಬರುತ್ತಿವೆ. 31ರ ಈ ಚೆಲುವೆ ಚಿತ್ರರಂಗದಲ್ಲಿ ಕೇವಲ ತನ್ನ ಸೌಂದರ್ಯವಷ್ಟೇ ಅಲ್ಲದೇ ಹಲವು ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಇದೀಗ ತಮ್ಮ ‘ಛತ್ರಿವಾಲಿ‘ ಎಂಬ ಹೊಸ ಸಿನಿಮಾ ಘೋಷಣೆ ಮಾಡಿರುವ ರಾಕುಲ್, ಆ ಸಿನಿಮಾದ ಮೊದಲ ನೋಟವನ್ನು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಅನಾವರಣಗೊಳಿಸಿದ್ದಾರೆ. ಛತ್ರಿವಾಲಿಯಲ್ಲಿ ರಾಕುಲ್ ಪ್ರೀತ್ ಸಿಂಗ್ ಪಾತ್ರ ಕಂಡು ಬಹುತೇಕರು ಅವಕ್ಕಾಗಿದ್ದಾರೆ.

ಈ ಚಿತ್ರದಲ್ಲಿ ರಾಕುಲ್ ಕಾಂಡೋಮ್ ಹಿಡಿದು ಬಂದಿದ್ದಾರೆ. ಅಂದರೆ, ಕಾಂಡೋಮ್ ಪರೀಕ್ಷೆ ಮಾಡುವ ಒಬ್ಬ ಮಾರಾಟ ಪ್ರತಿನಿಧಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಇದು ಸಕತ್ ವೈರಲ್ ಆಗುತ್ತಿದೆ. ತಮ್ಮ ಈ ಪಾತ್ರದ ಬಗ್ಗೆ 'ನಾನು ಕಾತರಕ್ಕೆಒಳಗಾಗಿದ್ದೇನೆ' ಎಂದು ರಾಕುಲ್ ಹೇಳಿಕೊಂಡಿದ್ದಾರೆ.

ಇನ್ನು ಈ ಚಿತ್ರವನ್ನು ತೇಜಸ್ ಪ್ರಭಾ ವಿಜಯ್ ಡಿಯೋಸ್ಕರ್ ನಿರ್ದೇಶಿಸುತ್ತಿದ್ದಾರೆ. ಇದೊಂದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದು ಹೇಳಲಾಗುತ್ತಿದೆ. ಖ್ಯಾತ ನಿರ್ಮಾಪಕ ರೋನಿ ಅವರ ಆರ್‌ಎಸ್‌ವಿಪಿ ಫ್ರೊಡಕ್ಸನ್ ಸಂಸ್ಥೆ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.

'ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದಿದ ಯುವತಿಯೊಬ್ಬಳು ಎಲ್ಲಿಯೂ ಉದ್ಯೋಗ ಸಿಗದಿದ್ದಾಗ ಸಣ್ಣ ನಗರವೊಂದರಲ್ಲಿ ಕಾಂಡೋಮ್ ಟೆಸ್ಟರ್ ಆಗಿ ಹೇಗೆಲ್ಲಾ ಕೆಲಸ ಮಾಡುತ್ತಾಳೆ ಎನ್ನುವ ಕಥೆಯನ್ನು ಛತ್ರಿವಾಲಿ ಹೊಂದಿದೆ. ಈ ಪಾತ್ರಕ್ಕೆ ರಾಕುಲ್ ನ್ಯಾಯ ಒದಗಿಸುತ್ತಾರೆ ಎನ್ನುವ ಸಂಪೂರ್ಣ ನಂಬಿಕೆ ನನಗಿದೆ.ರಾಕುಲ್ ಯಾವಾಗಲೂ ವಿಭಿನ್ನ ಪಾತ್ರಗಳಿಗೆ ತೆರೆದುಕೊಳ್ಳುತ್ತಾರೆ' ಎಂದು ನಿರ್ದೇಶಕ ಡಿಯೋಸ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT