ಶನಿವಾರ, ಸೆಪ್ಟೆಂಬರ್ 25, 2021
22 °C

ರಾಮ್‌ಚರಣ್‌ ಜೊತೆ ಎಸ್ ಶಂಕರ್ ಹೊಸ ಸಿನಿಮಾ: ಹೈದರಾಬಾದ್‌ನಲ್ಲಿ ಅದ್ಧೂರಿ ಮುಹೂರ್ತ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿರ್ದೇಶಕ ಎಸ್ ಶಂಕರ್ ಅವರು ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ಅವರಿಗೆ ಆಕ್ಸನ್ ಕಟ್ ಹೇಳಲು ತಯಾರಾಗಿದ್ದು, ‘ಆರ್‌ಸಿ15‘ ಎಂಬ ಹೊಸ ಪ್ರೊಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವ ಇದರ ಟೈಟಲ್ ಏನು ಎಂಬುದು ಸದ್ಯ ಬಹಿರಂಗಗೊಂಡಿಲ್ಲ.

ಈ ಚಿತ್ರದ ಮುಹೂರ್ತ ಸಮಾರಂಭ ಬುಧವಾರ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಎಸ್.ಶಂಕರ್, ನಿರ್ದೇಶಕ ಎಸ್‌ಎಸ್‌ ರಾಜಮೌಳಿ, ಬಾಲಿವುಡ್ ನಟ ರಣವೀರ್ ಸಿಂಗ್, ನಟ ರಾಮ್‌ಚರಣ್, ನಟಿ ಕೈರಾ ಅಡ್ವಾಣಿ, ಜಯರಾಂ, ಸುನೀಲ್, ನಿರ್ಮಾಪಕ ದಿಲ್‌ ರಾಜು ಭಾಗವಹಿಸಿದ್ದರು.

ಇದೇ ವೇಳೆ ಫೋಟೊಶೂಟ್ ಕೂಡ ನಡೆದಿದ್ದು, ಸಮಾರಂಭದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದರಲ್ಲೂ ರಣವೀರ್ ಸಿಂಗ್ ಅವರ ವಿಶಿಷ್ಠ ಲುಕ್ ಕಾರ್ಯಕ್ರಮಕ್ಕೆ ಸಾಕಷ್ಟು ಮೆರಗು ತಂದಿತ್ತು.

 

ಇನ್ನು, ಸಿನಿಮಾದ ಮೊಟ್ಟಮೊದಲ ಫೋಸ್ಟರ್ ಕೂಡ ಅನಾವರಣ ಆಗಿದ್ದು, ‘We are Coming‘ ಎಂದು ಹೇಳುವ ಮೂಲಕ ಶಂಕರ್ ಸಿನಿ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಅಭಿನಯಿಸುತ್ತಿದ್ದಾರೋ ಇಲ್ಲವೋ ಎಂಬುದನ್ನು ಚಿತ್ರತಂಡ ಸ್ಪಷ್ಟಪಡಿಸಿಲ್ಲ. ಆದರೆ, ಸದ್ಯ ಶಂಕರ್ ಅವರು ಹಿಂದಿಯಲ್ಲಿ ನಿರ್ದೇಶಿಸುತ್ತಿರುವ ‘ಅನ್ನಿಯನ್‘ ಸಿನಿಮಾದಲ್ಲಿ ರಣವೀರ್ ಸಿಂಗ್ ನಾಯಕ ಪಾತ್ರದಲ್ಲಿ ನಟಿಸುತ್ತಿದ್ದಾರೆ.

 

ಹಲವು ಹಿಟ್ ಚಿತ್ರಗಳನ್ನು ಭಾರತೀಯ ಚಿತ್ರರಂಗಕ್ಕೆ ನೀಡಿರುವ ಎಸ್ ಶಂಕರ್ ಅವರು ಇದೇ ಮೊದಲ ಬಾರಿಗೆ ರಾಮ್‌ಚರಣ್ ಅವರಿಗೆ ನಿರ್ದೇಶಿಸುತ್ತಿದ್ದಾರೆ. ಎಸ್‌ವಿಸಿ ಕ್ರಿಯೇಷನ್ಸ್‌ ನಿರ್ಮಾಣ ಕಂಪನಿಯಲ್ಲಿ ಇದು (SVC50) ತಯಾರುಗುತ್ತಿದೆ. 

ಇದನ್ನೂ ಓದಿ: ಡ್ರಗ್ಸ್‌ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ನಿರೂಪಕಿ, ನಟಿ ಅನುಶ್ರೀ ಹೆಸರು ಉಲ್ಲೇಖ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು