ಇನ್‌ಸ್ಟಾಗ್ರಾಮ್‌ನಲ್ಲಿ ರಾಮ್‌ಚರಣ್

ಮಂಗಳವಾರ, ಜೂಲೈ 23, 2019
22 °C

ಇನ್‌ಸ್ಟಾಗ್ರಾಮ್‌ನಲ್ಲಿ ರಾಮ್‌ಚರಣ್

Published:
Updated:

ಬೆಂಗಳೂರು: ಸಿನಿಮಾ ರಂಗದ ಸ್ಟಾರ್‌ಗಳು, ಕ್ರೀಡಾಪಟುಗಳು ಹೀಗೆ ಸಾಕಷ್ಟು ಮಂದಿ ಇನ್‌ಸ್ಟಾದಲ್ಲಿ ಖಾತೆ ತೆರೆದು ತಮ್ಮ ನೆಚ್ಚಿನ ಫೋಟೊ, ವಿಡಿಯೊಗಳನ್ನು ಸುಂದರ ಅಡಿಬರಹದಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಇದಕ್ಕೆ ಹೊಸ ಸೇರ್ಪಡೆ ಮಗಧೀರ ಖ್ಯಾತಿಯ ರಾಮ್‌ ಚರಣ್.

ತಮ್ಮ ಮೊದಲ ಪೋಸ್ಟನ್ನು ಅಮ್ಮನಿಗೆ ಸಮರ್ಪಿಸಿದ್ದು, ಕೆಲವು ಎಂದಿಗೂ ಬದಲಾಗದು! ನನ್ನ ಮೊದಲ ಪೋಸ್ಟನ್ನು ಅಮ್ಮನಿಗೆ ಅರ್ಪಿಸುತ್ತಿದ್ದೇನೆ. ಲವ್ ಯು ಅಮ್ಮ. #ಮಾಮ್ಸ್‌ಬಾಯ್ (ಅಮ್ಮನ ಮಗ) #ಫಾರೆವರ್ ಎಂಬ ಬರಹದೊಂದಿಗೆ ಅಮ್ಮನೊಟ್ಟಿಗಿನ ಫೋಟೊಗಳನ್ನು ಲಗತ್ತಿಸಿಕೊಂಡಿದ್ದಾರೆ. ಇತ್ತೀಚಿನ ಒಂದು ಚಿತ್ರ, ಮತ್ತೊಂದು ಬಾಲ್ಯದ ದಿನಗಳ ಫೋಟೊ ಹಾಕಿದ್ದಾರೆ. 

‘ನಾನು ಕೊನೆಗೂ ಇನ್‌ಸ್ಟಾಗ್ರಾಮ್‌ಗೆ ಬಂದಿದ್ದೇನೆ. ಸಂಪರ್ಕಕ್ಕೆ ಇದೊಂದು ಹೊಸ ವೇದಿಕೆ. ಇದು ನನಗೆ ಹೊಸತು,.. ’ ಎಂದು ಹೇಳಿಕೊಂಡಿದ್ದಾರೆ.

ರಾಮ್ ಚರಣ್ ಅವರ ಇನ್‌ಸ್ಟಾ ಎಂಟ್ರಿಗೆ ಖುಷಿಪಟ್ಟಿರುವ ಬಾಹುಬಲಿ ಖ್ಯಾತಿಯ ರಾನಾ ದಗ್ಗುಬಾಟಿ,  ‘ಎಂಟರ್‌ ದ ಡ್ರಾಗನ್‌, ವೆಲ್‌ಕಮ್‌ ಟು ಇನ್‌ಸ್ಟಾ ಬ್ರದರ್‌ಮ್ಯಾನ್ ’ಎಂಬ ಒಕ್ಕಣೆಯೊಂದಿಗೆ ವಿಡಿಯೊ ಹಾಕಿದ್ದಾರೆ. ಇದನ್ನು 3,58,217ಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ. 

 
 
 
 

 
 
 
 
 
 
 
 
 

“ENTER THE DRAGON 🐉”!! Welcome to Insta brotherman!! @alwaysramcharan

A post shared by Rana Daggubati (@ranadaggubati) on

Post Comments (+)