ಸೋಮವಾರ, ಮಾರ್ಚ್ 27, 2023
32 °C

ಅನುರಾಗ್ ಕಶ್ಯಪ್‌ಗೆ ಆರ್‌ಜಿವಿ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ನಿರ್ದೇಶಕ ಅನುರಾಗ್ ಕಶ್ಯಪ್ ಪರವಾಗಿ ನಿಂತಿದ್ದಾರೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ. ಟ್ವೀಟರ್‌ನಲ್ಲಿ ಅನುರಾಗ್ ಪರ ಮಾತನಾಡಿದ್ದಾರೆ ಆರ್‌ಜಿವಿ.

‘ನನಗೆ ತಿಳಿದಿರುವ ಹಾಗೆ ಅನುರಾಗ್ ತುಂಬಾ ಸೂಕ್ಷ್ಮ ಮನಸ್ಸಿನ, ಭಾವನಾತ್ಮಕ ವ್ಯಕ್ತಿತ್ವ ಹೊಂದಿರುವವರು. ಅವರು 20 ವರ್ಷಗಳಿಂದ ನನಗೆ ಪರಿಚಯ. ಇಷ್ಟು ವರ್ಷಗಳಲ್ಲಿ ಅವರು ಬೇರೆಯವರನ್ನು ನೋಯಿಸಿದ ಉದಾಹರಣೆಯನ್ನು ನಾನು ಎಂದೂ ನೋಡಿಲ್ಲ, ಕೇಳೂ ಇಲ್ಲ. ಇಲ್ಲಿ ಈಗ ಏನು ನಡೆಯುತ್ತಿದೆ ಎಂಬುದನ್ನು ಸ್ವಷ್ಟವಾಗಿ ಹೇಳಲು ಸಾಧ್ಯವಾಗುತ್ತಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ ರಾಮ್‌ಗೋಪಾಲ್ ವರ್ಮಾ.

 

 

 

‘ಪಟೇಲ್ ಕಿ ಪಂಜಾಬಿ ಶಾದಿ’ ಖ್ಯಾತಿಯ ನಟಿ ಪಾಯಲ್‌ ಘೋಷ್ ಅನುರಾಗ್ ಕಶ್ಯಪ್ ಮೇಲೆ ಮೀ ಟೂ ಆರೋಪ ಹೊರಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಆರ್‌ಜಿವಿ ಟ್ವೀಟ್ ಮಾಡಿದ್ದಾರೆ.

 

ಪಾಯಲ್ ಆರೋಪದ ನಂತರ ನಿರ್ಮಾಪಕರಾದ ಹನ್ಸಲ್ ಮೆಹ್ತಾ, ವಸನ್ ಬಾಲ ಹಾಗೂ ಅನುಭವ್ ಸಿಹ್ನಾ ಸೇರಿದಂತೆ ಅನೇಕ ಬಾಲಿವುಡ್‌ ಮಂದಿ ಅನುರಾಗ್‌ ಬೆಂಬಲಕ್ಕೆ ನಿಂತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು