ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ನಾಟಕ: ಪೂನಂ ಪಾಂಡೆ ಬೆಂಬಲಕ್ಕೆ ನಿಂತ ರಾಮ್ ಗೋಪಾಲ್ ವರ್ಮಾ

Published 4 ಫೆಬ್ರುವರಿ 2024, 3:26 IST
Last Updated 4 ಫೆಬ್ರುವರಿ 2024, 3:26 IST
ಅಕ್ಷರ ಗಾತ್ರ

ಮುಂಬೈ: ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾವಿನ ನಾಟಕವಾಡಿದ ನಟಿ ಪೂನಂ ಪಾಂಡೆ ವಿರುದ್ಧ ನಿರ್ದೇಶಕ ವಿವೇಕ ಅಗ್ನಿಹೋತ್ರಿ ಸೇರಿದಂತೆ ಹಲವರು ಕಿಡಿಕಾರಿದ್ದಾರೆ. ಆದರೆ ತೆಲುಗು ನಿರ್ದೇಶಕ ರಾಮ್‌ ಗೋಪಾಲ್ ವರ್ಮಾ ಮಾತ್ರ ಪೂನಂ ಬೆಂಬಲಕ್ಕೆ ನಿಂತಿದ್ದಾರೆ.

ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗಿ ಶುಕ್ರವಾರ(ಫೆ.2) ನಟಿ ಪೂನಂ ಪಾಂಡೆ ಮೃತಪಟ್ಟಿದ್ದಾರೆ ಎಂದು ಪೂನಂ ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್ ಹಾಕಲಾಗಿತ್ತು. ಮರುದಿನ ವಿಡಿಯೊ ಸಂದೇಶದ ಕಳುಹಿಸಿದ ಪೂನಂ, ನಾನು ಬದುಕಿರುವುದಾಗಿ ತಿಳಿಸಿದ್ದರು. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ನಾಟಕವಾಡಿರುವುದಾಗಿಯೂ ಹೇಳಿದ್ದರು.

ಪೂನಂ ಸಾವಿನ ನಾಟಕಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಚಾರದ ಹುಚ್ಚು ಎಂದು ಜರಿದಿದ್ದರು. ಈ ನಾಟಕ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದಕ್ಕಿಂತ, ಅದರ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದುವ ಸಾಧ್ಯತೆಯೇ ಹೆಚ್ಚು ಎಂದು ಆತಂಕ ಹೊರಹಾಕಿದ್ದರು. ಅಲ್ಲದೇ ಕ್ಯಾನ್ಸರ್ ರೋಗಿಗಳಿಗೆ ಪೂನಂ ಅವಮಾನ ಮಾಡಿದ್ದಾರೆ ಎಂದು ಕೆಲವರು ಕಿಡಿಕಾರಿದ್ದರು.

ಏತನ್ಮಧ್ಯೆ, ಪೂನಂ ಸಾವಿನ ನಾಟಕದ ಬಗ್ಗೆ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ನಿನ್ನ ಆತ್ಮ ನಿನ್ನಷ್ಟೇ ಸುಂದರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ನೀನು ತೆಗೆದುಕೊಂಡ ದಾರಿಯ ಬಗ್ಗೆ ಕೆಲವರಿಂದ ಟೀಕೆ ವ್ಯಕ್ತವಾಗಿರಬಹುದು. ಆದರೆ ಸಾವಿನ ನಾಟಕದಿಂದ ನೀನು ಸಾಧಿಸಿರುವುದೇನು? ಅದರ ಹಿಂದಿರುವ ನಿನ್ನ ಉದ್ದೇಶವೇನು? ಎಂದು ಯಾರು ಪ್ರಶ್ನಿಸುವುದಿಲ್ಲ. ಗರ್ಭಕಂಠದ ಕ್ಯಾನ್ಸರ್ ಕುರಿತಾದ ಚರ್ಚೆ ಇದೀಗ ಟ್ರೆಂಡ್‌ ಆಗುತ್ತಿದೆ. ನಿನ್ನ ಆತ್ಮ ನಿನ್ನಷ್ಟೇ ಸುಂದರ. ನಿನಗೆ ಒಳಿತನ್ನು ಬಯಸುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT