ಋಷಿ ನಿರ್ಮಿಸಿ, ನಿರ್ದೇಶಿಸಿರುವ ‘ರಾಮ್ ರಹೀಮ್’ ಚಿತ್ರ ಫೆಬ್ರುವರಿಯಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಶೋರೀಲ್ ಬಿಡುಗಡೆಗೊಳಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ.

‘ಶೋ ರೀಲ್ನಲ್ಲಿ ‘ಯಾರೂ ಸಿನಿಮಾ ನೋಡಬೇಡಿ’ ಎಂದು ಹೇಳಿದ್ದೇನೆ. ಅದಕ್ಕೆ ಕಾರಣವೂ ಇದೆ. ಇದು ಯಾವುದೇ ಗಿಮಿಕ್ ಅಲ್ಲ. ಕಾರಣವನ್ನು ಚಿತ್ರ ಬಿಡುಗಡೆಯ ದಿನ ನಾನೇ ತಿಳಿಸುತ್ತೇನೆ. ಈಗ ಸಿನಿಮಾ ಮಾಡುವುದು ಕಷ್ಟ. ಮಾಡಿದರೂ ತೆರೆಗೆ ತರುವುದು ಇನ್ನೂ ಕಷ್ಟ. ಹಾಗಾಗಿ ಈ ಚಿತ್ರವನ್ನು ನಾನೇ ವಿತರಣೆ ಮಾಡುತ್ತೇನೆ. ಸಾಮಾನ್ಯವಾಗಿ ಎಲ್ಲರೂ ಚಿತ್ರದ ಟೀಸರ್, ಟ್ರೇಲರ್ ಬಿಡುಗಡೆ ಮಾಡುತ್ತಾರೆ. ಆದರೆ ನಾನು 11 ನಿಮಿಷ 22 ಸೆಕೆಂಡ್ ಅವಧಿಯ ಶೋ ರೀಲ್ ಅನ್ನು ನಮ್ ಋಷಿ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಮಾಡಿದ್ದೇನೆ’ ಎಂದರು ಋಷಿ.

ಹಿಂದೂ, ಮುಸ್ಲಿಂ ಹುಡುಗರ ನಡುವಿನ ತ್ರಿಕೋನ ಪ್ರೇಮಕಥೆಯನ್ನು ಚಿತ್ರ ಹೊಂದಿದೆ. ಅರುಣ್ ಕ್ಯಾದಿಗೆರ, ಕಿರಣ್ ಈಡಿಗ, ರಾಜೇಶ್ವರಿ, ಅಮರೇಶ್ ಮಲ್ಲಾಪುರ ಮುಂತಾದವರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.