ಸೋಮವಾರ, ಜುಲೈ 4, 2022
25 °C

ವೂಟ್‌ ಸೆಲೆಕ್ಟ್‌ನಲ್ಲಿ 'ರಾಮನ ಸವಾರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಮನ ಸವಾರಿ’ ಚಿತ್ರ ವೂಟ್‌ ಸೆಲೆಕ್ಟ್‌ ಒಟಿಟಿಯಲ್ಲಿ ಪ್ರಸಾರ ಆರಂಭವಾಗಿದೆ. ಸುಮಾರು ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರ ಈಗ ವೂಟ್‌ ವೇದಿಕೆಯಲ್ಲಿ ಜಾಗ ಪಡೆದಿದೆ. 

ಕೆ. ಶಿವರುದ್ರಯ್ಯ ಈ ಚಿತ್ರದ ನಿರ್ದೇಶಕರು. ರಾಜೇಶ್ ನಟರಂಗ, ಸೋನು ಗೌಡ, ಸುಧಾ ಬೆಳವಾಡಿ, ಭಾರ್ಗವಿ ನಾರಾಯಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲನಟ ಮಾಸ್ಟರ್ ಆ್ಯರೆನ್ ಚಿತ್ರದ ಮುಖ್ಯ ಪಾತ್ರಧಾರಿ ರಾಮನಾಗಿ ಅಭಿನಯಿಸಿದ್ದಾರೆ. ಕೆ.ಕಲ್ಯಾಣ್‌ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಗಿರೀಶ್ ಕಾಸರವಳ್ಳಿ ಅವರು ಸಂಭಾಷಣೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಸ್ಟ್ರೋಯ್ನಿ ಜೋಸೆಫ್ ಪಾಯ್ಸ್ ಈ ಚಿತ್ರದ ನಿರ್ಮಾಪಕರು. 

ಚಿತ್ರವು ರಾಮ ಎಂಬ ಪುಟ್ಟ ಬಾಲಕನ ಪಯಣವನ್ನು ಹೇಳುತ್ತದೆ. ರಾಮ ತನ್ನ ತಾಯಿ ಮತ್ತು ಅಜ್ಜಿಯ ಜೊತೆ, ತಂದೆಯಿಂದ ದೂರವಾಗಿ ವಾಸವಾಗಿರುತ್ತಾನೆ. ಊರಿನ ಜಾತ್ರೆಯಲ್ಲಿ ಆಕಸ್ಮಾತ್ ತನ್ನ ತಂದೆಯನ್ನು ಮೊದಲ ಬಾರಿ ಭೇಟಿಯಾಗುತ್ತಾನೆ. ಒಡೆದು ಹೋದ ಕುಟುಂಬವನ್ನು ಜೋಡಿಸಲು ರಾಮ ಹೇಗೆ ಸೇತುವೆಯಾಗುತ್ತಾನೆ ಎಂಬುದು ಚಿತ್ರದ ಕಥೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು