ಟಾಲಿವುಡ್‌ನ ಸಾಕಷ್ಟು ನಟ, ನಟಿಯರು ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿರುವುದು ಹೊಸ ವಿಷಯ ಏನಲ್ಲ.

ರಾಮ್ ಚರಣ್ ಕೊನಿಡೇಲಾ, ನಂದಮೂರಿ ಕಲ್ಯಾಣರಾಮ್, ಪವನ್ ಕಲ್ಯಾಣ್, ನಿತಿನ್, ಮಹೇಶ್ ಬಾಬು, ನಾಣಿ ಎಲ್ಲರೂ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಈ ಸಾಲಿಗೆ ಈಗ ‘ಬಾಹುಬಲಿ’ ಖ್ಯಾತಿಯ ರಾನಾ ದಗ್ಗುಬಾಟಿ ಕೂಡ ಸೇರಿದ್ದಾರೆ.

ರಾಜ್ ತರುಣ್, ಅನೀಷ್ ಕೃಷ್ಣ ಅವರ ಅಭಿನಯದ ಸಿನಿಮಾವನ್ನು ತಮ್ಮ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ರಾಣಾ ಹೊರಲಿದ್ದಾರೆ.

ರಾಜ್ ತರುಣ್ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡರೆ, ಹೆಸರಿಡದ ಚಿತ್ರದಲ್ಲಿ ಅನೀಷ್ ಕೃಷ್ಣ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಲವರ್’ ಸಿನಿಮಾದಲ್ಲಿ ಈ ಇಬ್ಬರು ನಟರು ಒಟ್ಟಿಗೆ ಕೆಲಸ ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಸಿನಿಮಾದ ಶೂಟಿಂಗ್ ಮಾಡಲು ತಂಡ ಸಿದ್ದತೆ ನಡೆಸಿದೆ. ಹಿಂದಿ ಸಿನಿಮಾ ‘ಡ್ರೀಮ್ ಗರ್ಲ್’ ನ ರಿಮೇಕ್ ಚಿತ್ರ ಇದಾಗಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

2010ರಲ್ಲಿ ರಾನಾ ನಟರಾಗಿ ಪರಿಚಿತಗೊಂಡರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಪಾತ್ರದಲ್ಲಿ ಮಿಂಚಿದರು. ಅಲ್ಲಿಂದ ಅವಕಾಶಗಳು ಹೆಚ್ಚಾದವು. ‘ನೇನು ನಾ ರಾಕ್ಷಸಿ’, ಕೃಷ್ಣಂ ವಂದೇ ಜಗದ್ಗುರು, ಬಾಹುಬಲಿ ಸಿನಿಮಾಗಳು ಅವರನ್ನು ಯಶಸ್ಸಿನ ಹಾದಿಗೆ ಕೊಂಡೊಯ್ದವು. ‘ರುದ್ರಮಾದೇವಿ’, ದಿ ಘಾಜಿ ಅಟ್ಯಾಕ್, ನೇನೆ ರಾಜ ನೇನೆ ಮಂತ್ರಿ ಸಿನಿಮಾಗಳಲ್ಲಿ ಇವರ ನಟನೆ ಮುನ್ನೆಲೆಗೆ ಬರಲು ಕಾರಣವಾದವು.

‘ಹಾಥಿ ಮೇರೆ ಸಾಥಿ’, ‘ಹಿರಣ್ಯ ಕಶ್ಯಪ್’ ಹಾಗೂ ‘ವೀರತಾಪರ್ವಂ’ ಸಿನಿಮಾಗಳು ತೆರೆ ಕಾಣಲು ಸಿದ್ದತೆ ನಡೆಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.