ಸದಾ ಸಿನಿಮಾ, ಧಾರಾವಾಹಿ, ವೆಬ್ ಸಿರೀಸ್ ಶೂಟಿಂಗ್ ಎಂದು ಬ್ಯುಸಿಯಾಗಿರುತ್ತಿದ್ದ ರಾಮನಾಯ್ಡು ಸ್ಟುಡಿಯೊ ಈಗ ಮದುವೆ ಕಳೆಯಲ್ಲಿ ಮಿಂಚುತ್ತಿದೆ. ನಟ ರಾಣಾದಗ್ಗುಬಾಟಿ ಮದುವೆಗಾಗಿಫಿಲ್ಮ್‌ನಗರ್‌ನಲ್ಲಿರುವ ಸ್ಟುಡಿಯೊ ಅಲಂಕಾರಗಳಿಂದ ಕಂಗೊಳಿಸುತ್ತಿದೆ.

ರಾಣಾ ಹಾಗೂ ಮಿಹಿಕಾ ಮದುವೆಗಾಗಿ ಇಲ್ಲಿ ವಿಶೇಷ ವಿವಾಹ ಮಂಟಪವನ್ನು ರಚಿಸಲಾಗಿದೆ. ಈ ಜೋಡಿ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಗಸ್ಟ್ 8 ರಂದು ಅವರ ಮದುವೆ ನಡೆಯಲಿದೆ.

ಮೊದಲು ಇವರ ಮದುವೆ ಸಮಾರಂಭವನ್ನು ಐಷಾರಾಮಿ ತಾಜ್ ಫಲಕ್‌ನುಮಾ ಪ್ಯಾಲೆಸ್‌ನಲ್ಲಿ ನಡೆಸಲು ಆಯೋಜಿಸಲಾಗಿತ್ತು. ಆದರೆ ಹೈದರಾಬಾದ್‌ನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದುಗ್ಗುಬಾಟಿ ಹಾಗೂ ಮಿಹಿಕಾ ಕುಟುಂಬ ಮದುವೆಯ ಸ್ಥಳವನ್ನು ಬದಲಿಸಿದೆ. ಈ ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ.

ರಾಣಾ ಮದುವೆ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ತಂದೆ ಸುರೇಶ್ ಬಾಬು ’ರಾಣಾ ಮದುವೆಯಲ್ಲಿ ಕೇವಲ 30 ಮಂದಿ ಅಷ್ಟೇ ಪಾಲ್ಗೊಳ್ಳುತ್ತಾರೆ. ಅತಿಥಿಗಳ ಪಟ್ಟಿಯಲ್ಲಿ ಕೇವಲ ಕುಟುಂಬದವರಿಗಷ್ಟೇ ಆಹ್ವಾನ ನೀಡಿದ್ದೇವೆ. ಸಿನಿಮಾ ಹಾಗೂ ಇತರ ರಂಗದ ಆತ್ಮೀಯರನ್ನೂ ಮದುವೆಗೆ ಆಹ್ವಾನಿಸಿಲ್ಲ. ಕೊರೊನಾ ಕೇಸ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಮ್ಮ ಕಾರ್ಯಕ್ರಮದಿಂದ ಯಾರ ಆರೋಗ್ಯವು ಕೆಡುವುದು ನಮಗೆ ಇಷ್ಟವಿಲ್ಲ. ಈ ಕಾರ್ಯಕ್ರಮ ಸಣ್ಣದಾದರೂ ತುಂಬಾ ಚೆನ್ನಾಗಿ ನಡೆಯುತ್ತದೆ’ ಎಂದಿದ್ದಾರೆ.

ಮದುವೆಯ ನಡೆಯುವ ಜಾಗವನ್ನು ಪೂರ್ತಿಯಾಗಿ ಸ್ಯಾನಿಟೈಸ್ ಮಾಡಲು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಸುರೇಶ್ ಬಾಬು ’ಮದುವೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಮೊದಲೇ ಕೋವಿಡ್ ಪರೀಕ್ಷೆಗೆ ಒಳಗಾಗುತ್ತಾರೆ. ನಾವು ಕೂಡ ಇಡೀ ಮಂಟಪವನ್ನು ಸ್ಯಾನಿಟೈಸ್ ಮಾಡುವ ಯೋಚನೆ ಮಾಡಿದ್ದೇವೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತೇವೆ. ಇದು ಸಡಗರದ ಸಮಯ. ಅದರೊಂದಿಗೆ ಸುರಕ್ಷಿತವಾಗಿರುವುದು ತುಂಬಾ ಮುಖ್ಯ’ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.