ಶುಕ್ರವಾರ, ಮಾರ್ಚ್ 5, 2021
17 °C

‘ಡೆವಿಲ್‌’ಗೆ ರಣಬೀರ್‌ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಬೀರ್‌ ಸಿಂಗ್ ಬಾಕ್ಸಾಫೀಸಿನಲ್ಲಿ ಹಿಟ್‌ ಆದ ಬೆನ್ನಲ್ಲೇ  ಆ ಚಿತ್ರದ ನಿರ್ದೇಶಕ ಸಂದೀಪ್‌ ವಾಂಗಾ ಮುಂದಿನ ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ. ಕ್ರೈಂ ಥ್ರಿಲ್ಲರ್‌ ಸಿನಿಮಾ ‘ಡೆವಿಲ್‌’ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದು, ರಣಬೀರ್‌ ಕಪೂರ್‌ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದಾರೆ.

ಕಬೀರ್‌ ಸಿಂಗ್‌ ನಿರ್ದೇಶಕ ಸಂದೀಪ್‌ ವಾಂಗ ಅವರ ಮುಂದಿನ ಚಿತ್ರಕ್ಕೆ ರಣಬೀರ್‌ ಕಪೂರ್‌ ನಾಯಕ ಎಂಬ ಸುದ್ದಿ ಬಿ–ಟೌನ್‌ನಲ್ಲಿ ಹರಿದಾಡುತ್ತಿದೆ. ಈ ಚಿತ್ರದ ನಿರ್ಮಾಪಕ ಭೂಷಣ್‌ಕುಮಾರ್‌ ‘ನಾವು ಆ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ನಿಜ. ಆದರೆ ನಾಯಕನ ಪಾತ್ರಕ್ಕೆ ಯಾವ ನಟನೂ ಅಂತಿಮವಾಗಿಲ್ಲ. ಸಂದೀಪ್‌ ವಾಂಗ ಚಿತ್ರಕತೆ ಸಿದ್ಧ ಮಾಡುತ್ತಿದ್ದಾರೆ. ಯಾವಾಗ ಸಿದ್ಧವಾಗುತ್ತೋ ಆಗ ಅಧಿಕೃತವಾಗಿ ಚಿತ್ರದ ಬಗ್ಗೆ ಘೋಷಣೆ ಮಾಡುತ್ತೇವೆ. ಇಲ್ಲಿಯವೆರಗೂ ಯಾವ ನಟ– ನಟಿಯರನ್ನು ಭೇಟಿ ಮಾಡಿಲ್ಲ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು