ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Animal New Poster | ರಣಬೀರ್‌ ಕಪೂರ್ ಜೊತೆ ರಶ್ಮಿಕಾ ಲಿಪ್‌ ಲಾಕ್‌

Published 10 ಅಕ್ಟೋಬರ್ 2023, 6:39 IST
Last Updated 10 ಅಕ್ಟೋಬರ್ 2023, 6:44 IST
ಅಕ್ಷರ ಗಾತ್ರ

ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಅವರ ಹೊಸ ಚಿತ್ರ ‘ಅನಿಮಲ್‌’ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಾಲಿವುಡ್‌ ನಟ ರಣಬೀರ್‌ ಕಪೂರ್ ಮತ್ತು ನಟಿ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ನಾಳೆ ಚಿತ್ರದ ‘ಹು ಮೇ’ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಈ ಕುರಿತಂತೆ ಚಿತ್ರತಂಡ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದು, ಪೋಸ್ಟರ್‌ನಲ್ಲಿ ರಣಬೀರ್‌–ರಶ್ಮಿಕಾ ಲಿಪ್‌ ಲಾಕ್‌ ಮಾಡಿರುವ ದೃಶ್ಯವನ್ನು ಕಾಣಬಹುದಾಗಿದೆ.

‘ಅಕ್ಟೋಬರ್ 11ಕ್ಕೆ ಚಿತ್ರದ ಹೊಸ ಹಾಡು ಬಿಡುಗಡೆಯಾಗಲಿದ್ದು, ಹಿಂದಿ, ತಮಿಳು, ಕನ್ನಡ, ಮಲಯಾಳಂ, ತಮಿಳಿನಲ್ಲಿಯೂ ಹಾಡು ಬರಲಿದೆ’ ಎಂಬ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿದೆ.

ಗೀತಾ ಗೋವಿಂದಂ, ಡಿಯರ್‌ ಕಾಮ್ರೇಡ್‌ ಚಿತ್ರಗಳಲ್ಲಿ ವಿಜಯ್‌ ದೇವರಕೊಂಡ ಅವರೊಂದಿಗೆ ಲಿಪ್‌ ಲಾಕ್‌ ಮಾಡುವ ಮೂಲಕ ಭಾರೀ ಸದ್ದು ಮಾಡಿದ್ದ ರಶ್ಮಿಕಾ ಇದೀಗ ಮತ್ತೆ ಲಿಪ್‌ ಲಾಕ್‌ ವಿಷಯಕ್ಕೆ ಸುದ್ದಿಯಾಗಿದ್ದಾರೆ.

‘ಕಬೀರ್ ಸಿಂಗ್‌’ ನಂತರ ಸಂದೀಪ್‌ ರೆಡ್ಡಿ ನಿರ್ದೇಶನ ಎರಡನೇ ಬಾಲಿವುಡ್‌ ಚಿತ್ರ ಇದಾಗಿದೆ. ಸನ್ನಿ ದೇವೊಲ್‌, ಅನಿಲ್‌ ಕಪೂರ್‌ ಸೇರಿದಂತೆ ಅತ್ಯುನ್ನತ ತಾರಾ ಬಳಗವನ್ನು ಚಿತ್ರ ಹೊಂದಿದೆ. ಡಿಸೆಂಬರ್‌ 1ಕ್ಕೆ ಬೆಳ್ಳಿ ತೆರೆಯ ಮೇಲೆ ಬರಲು ಚಿತ್ರ ಸಜ್ಜಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT