2014ರಲ್ಲಿ ತೆರೆ ಕಂಡ ‘ಮರ್ದಾನಿ’ ಸಿನಿಮಾಯ ಯಶಸ್ಸಿನ ನಂತರ ರಾಣಿ ಮುಖರ್ಜಿಯ ಹೆಸರು ಚಿತ್ರರಂಗದಲ್ಲಿ ಮತ್ತೆ ಚಾಲ್ತಿಗೆ ಬಂದಿತ್ತು. ನಂತರ ‘ಹಿಚ್ಕಿ’ ಮೂಲಕ ರಾಣಿ ಸಿನಿರಂಗದಲ್ಲಿ ತೊಡಗಿಸಿಕೊಂಡರೂ, ಯಶಸ್ಸು ಅಷ್ಟಾಗಿ ದಕ್ಕಲಿಲ್ಲ. ಇತ್ತೀಚಿನ ಸುದ್ದಿ ಏನೆಂದರೆ ರಾಣಿ ‘ಮರ್ದಾನಿ–2’ ಮೂಲಕ ಮತ್ತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಏಪ್ರಿಲ್ ಕೊನೆಯವಾರದಲ್ಲೇ ಈ ಬಗ್ಗೆ ಮಾಹಿತಿ ಹೊರಬಿದ್ದಿತ್ತಾದರೂ ಸುದ್ದಿ ಖಚಿತವಾಗಿರಲಿಲ್ಲ. ‘ಮರ್ದಾನಿ 2’ ರ ಫಸ್ಟ್ ಲುಕ್ ಹೊರಬಿದ್ದಿದ್ದು, ಸಿನಿಮಾ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ‘ಮರ್ದಾನಿ 2’ ಸಿನಿಮಾದ ತಂಡದ ಜತೆಗೆ ಸೆಟ್ನಲ್ಲಿ ಸೆಲ್ಫಿ ತೆಗೆಸಿಕೊಂಡಿರುವ ರಾಣಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಮರ್ದಾನಿ 2’ ಸಿನಿಮಾವನ್ನು ಗೋಪಿ ಪುಥಾರನ್ ನಿರ್ದೇಶಿಸಲಿದ್ದು, ಮುಂದಿನ ವರ್ಷ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ. ಈ ಸಿನಿಮಾದಲ್ಲೂ ರಾಣಿ, ಶಿವಾನಿ ಪಾತ್ರವನ್ನು ಮಂದುವರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.