ಶುಕ್ರವಾರ, ಡಿಸೆಂಬರ್ 3, 2021
24 °C

ಮಗುವಿನ ಹೆಸರು ಹೇಗಿರಬೇಕೆಂದು ನಿರ್ಧರಿಸಿದ ರಣವೀರ್ ಸಿಂಗ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Ranveer Singh Instagram

ಬೆಂಗಳೂರು: ಬಾಲಿವುಡ್ ನಟ ರಣವೀರ್ ಸಿಂಗ್ ಕಲರ್ಸ್ ವಾಹಿನಿಯಲ್ಲಿ ‘ದಿ ಬಿಗ್ ಪಿಕ್ಚರ್’ ಎಂಬ ಶೋ ನಡೆಸುತ್ತಿದ್ದಾರೆ.

ಇದೊಂದು ಕ್ವಿಜ‌್ ಶೋ ಆಗಿದ್ದು, ದೀಪಿಕಾ ಪಡುಕೋಣೆ ಈ ಕುರಿತು ವಿಶೇಷ ಮುತುವರ್ಜಿ ವಹಿಸಿ ಬೆಂಬಲ ನೀಡುತ್ತಿದ್ದಾರೆ ಎಂದು ರಣವೀರ್ ಸಿಂಗ್‌ ಹೇಳಿಕೊಂಡಿದ್ದಾರೆ.

ಅಲ್ಲದೆ, ಶೋ ಸಂದರ್ಭದಲ್ಲಿ ಮುಂದಿನ ಯೋಜನೆ, ಕುಟುಂಬ ಮತ್ತು ದೀಪಿಕಾ ಕುರಿತು ರಣವೀರ್ ಮಾತನಾಡಿದ್ದಾರೆ.

ರಣವೀರ್ ಕ್ವಿಜ್ ಸ್ಪರ್ಧಿ ಅಭಯ್ ಸಿಂಗ್ ಜತೆ ಮಾತನಾಡುವ ಸಂದರ್ಭದಲ್ಲಿ, ಮುಂದಿನ ಎರಡು- ಮೂರು ವರ್ಷಗಳಲ್ಲಿ ನಮಗೂ ಮಕ್ಕಳಾಗುತ್ತವೆ. ನಾನು ಮಗುವಿನ ಹೆಸರನ್ನು ಹುಡುಕುತ್ತಿದ್ದೇನೆ. ಶೌರ್ಯವೀರ್ ಸಿಂಗ್ ಹೆಸರು ನನಗೆ ಮೆಚ್ಚುಗೆಯಾಗಿದೆ ಎಂದು ಹೇಳಿದ್ದಾರೆ.

ಈ ಮೂಲಕ ಮಕ್ಕಳನ್ನು ಹೊಂದುವ ಬಯಕೆಯನ್ನು ರಣವೀರ್ ಸಿಂಗ್ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು