‘ಅರ್ಜುನ್ ರೆಡ್ಡಿ’ ಸಿನಿಮಾದ ನಾಯಕಿ ಶಾಲಿನಿ ಪಾಂಡೆ ಸದ್ಯದಲ್ಲೇ ಬಾಲಿವುಡ್ಗೆ ಎಂಟ್ರಿ ಕೊಡಲಿದ್ದಾರೆ. ಹೊಸ ಮುಖ ಹಾಗೂ ಮುಗ್ದ ನಟನೆ ಮೂಲಕ ಗಮನಸೆಳೆದಿದ್ದ ಶಾಲಿನಿ ಈಗ ರಣವೀರ್ ಸಿಂಗ್ ಜೊತೆ ತೆರೆಮೇಲೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.

ಪದಾರ್ಪಣೆ ಸಿನಿಮಾದಲ್ಲಿಯೇ ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್ನಲ್ಲಿ ಕೆಲಸ ಮಾಡುವ ಅವಕಾಶ ಶಾಲಿನಿಗೆ ಒಲಿದಿದೆ. ರಣವೀರ್ ಸಿಂಗ್ ಅಭಿನಯದ ‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾಕ್ಕೆ ಅವರು ನಾಯಕಿಯಾಗುವ ಸಾಧ್ಯತೆ ಹೆಚ್ಚಿದೆ.ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರು ಶಾಲಿನಿಗೆ ಮೊದಲ ಅವಕಾಶ ಕೊಟ್ಟಿದ್ದರು. ಈ ಸಿನಿಮಾ ಭಾರಿ ಹಿಟ್ ಆಗಿದ್ದರಿಂದ ತಮಿಳು ಹಾಗೂ ತೆಲುಗಿನ ಕೆಲವು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಕಲ್ಯಾಣ್ರಾಮ್ ಅವರ ‘118’ ಸಿನಿಮಾದಲ್ಲೂ ನಟಿಸಿದ್ದಾರೆ.

‘ಜಯೇಶ್ಭಾಯ್ ಜೋರ್ದಾರ್’ ಸಿನಿಮಾಕ್ಕೆ ದಿವ್ಯಾಂಗ್ ಠಕ್ಕರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ರೊಮ್ಯಾಂಟಿಕ್ ಹಾಗೂ ಕಾಮಿಡಿ ಸ್ಕ್ರಿಪ್ಟ್ ಹೊಂದಿರುವ ಸಿನಿಮಾವಾಗಿರುವ ಕಾರಣ, ಶಾಲಿನಿ ಸರಿಯಾದ ಆಯ್ಕೆ ಎಂಬ ತೀರ್ಮಾನಕ್ಕೆ ಚಿತ್ರತಂಡ ಬಂದಿದೆ ಎಂಬ ಮಾಹಿತಿ ಹರಿದಾಡುತ್ತಿದೆ.ಯಶ್ರಾಜ್ ಫಿಲ್ಮ್ಸ್ನಿಂದ ಪ್ರತಿಬಾರಿ ಹೊಸಮುಖವನ್ನು ಬಾಲಿವುಡ್ಗೆ ಪರಿಚಯಿಸಲಾಗುತ್ತದೆ. ಹೀಗೆ ಪರಿಚಯವಾದ ನಟ, ನಟಿಯರು ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಈ ಬಾರಿ ಇಂತದ್ದೇ ಅವಕಾಶ ಶಾಲಿನಿಗೆ ಸಿಗಲಿದೆ ಎಂಬ ಗುಸುಗುಸು ಬಾಲಿವುಡ್ನಲ್ಲಿ ಶುರುವಾಗಿದೆ.

ಗುಜರಾತ್ನ ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿದ ಯುವತಿ ಪಾತ್ರದಲ್ಲಿ ಶಾಲಿನಿ ಕಾಣಿಸಿಕೊಳ್ಳಲಿದ್ದಾರೆ. ಗುಜರಾತ್ನ ಬ್ಯುಸಿನೆಸ್ಮ್ಯಾನ್ ಪಾತ್ರ ರಣವೀರ್ ಅವರದ್ದು. ಈಗಾಗಲೇ ಸ್ಕ್ರೀನ್ ಟೆಸ್ಟ್ಗಾಗಿ ಶಾಲಿನಿ ಮುಂಬೈ ಹೋಗಿ ಬಂದಿದ್ದಾರೆ. ಆದಿತ್ಯಾ ಚೋಪ್ರಾ ಸದ್ಯದಲ್ಲೇ ಅಂತಿಮ ತೀರ್ಮಾನಕ್ಕೆ ಬರಲಿದ್ದಾರಂತೆ.

ಇದನ್ನೂ ಓದಿ:ದೀಪಿಕಾ ‘ಬೆಸ್ಟ್ ಕಿಸ್ಸರ್’ ಎಂದ ರಣವೀರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.