ಕಳೆದ ವರ್ಷ ಟಾಲಿವುಡ್‌ನಲ್ಲಿ ತೆರೆಕಂಡ ‘ಜೆರ್ಸಿ’ ಚಿತ್ರ ಹಿಂದಿಗೆ ರಿಮೇಕ್ ಆಗಿದೆ. ಶಾಹಿದ್ ಕಪೂರ್ ಈ ಚಿತ್ರದ ಹೀರೊ ಆಗಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಶ್ರದ್ಧಾ ಶ್ರೀನಾಥ್ ನಟಿಸಿದ್ದ ಪಾತ್ರದಲ್ಲಿರಶ್ಮಿಕಾಮಂದಣ್ಣ ನಟಿಸಲಿದ್ದಾರೆ ಎಂಬ ಸುದ್ದಿ ಆಗ ಹರಿದಾಡಿತ್ತು. ಆ ಮೂಲಕರಶ್ಮಿಕಾಬಾಲಿವುಡ್ ಪ್ರವೇಶಿಸಲು ವೇದಿಕೆ ಸಿದ್ಧವಾಗಿದೆ ಎಂದು ಆಕೆಯ ಅಭಿಮಾನಿಗಳು ಖುಷಿಯಲ್ಲಿ ತೇಲುತ್ತಿದ್ದರು. ಕೊನೆ ಗಳಿಗೆಯಲ್ಲಿ ಆಕೆ ಈ ಚಿತ್ರದಿಂದ ಹೊರ ನಡೆದಿದ್ದು ಅಚ್ಚರಿ ಮೂಡಿಸಿತು. ಅವರ ಪಾತ್ರದಲ್ಲಿ ಈಗ ಮೃಣಾಲ್ ಟಾಕೂರ್ ನಟಿಸುತ್ತಿದ್ದಾರೆ.