ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ

ಸೋಮವಾರ, ಜೂನ್ 17, 2019
28 °C
ಸಿನಿಮಾವೊಂದಕ್ಕೆ ₹ 40 ಲಕ್ಷದಿಂದ ₹ 80 ಲಕ್ಷಕ್ಕೆ ಏರಿಕೆ

ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ

Published:
Updated:
Prajavani

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ. ‘ಕಿರಿಕ್‌ ಪಾರ್ಟಿ’ ಚಿತ್ರದ ಮೂಲಕ ಬಣ್ಣದಲೋಕ ಪ್ರವೇಶಿಸಿದ ಅವರು ತೆಲುಗಿಗೂ ಕಾಲಿಟ್ಟರು. ನಟ ವಿಜಯ ದೇವರಕೊಂಡ ನಟನೆಯ ‘ಗೀತ ಗೋವಿಂದಂ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಈ ಸಿನಿಮಾದ ಯಶಸ್ಸಿನ ಬಳಿಕ ಅವರಿಗೆ ತೆಲುಗಿನಲ್ಲಿ ಅವರಿಗೆ ಅವಕಾಶದ ಹೆಬ್ಬಾಗಿಲು ತೆರೆಯಿತು. ವಿಜಯ ದೇವರಕೊಂಡ ನಟಿಸುತ್ತಿರುವ ‘ಡಿಯರ್‌ ಕಾಮ್ರೇಡ್‌’ ಚಿತ್ರದಲ್ಲೂ ಅವರೇ ನಾಯಕಿ.

ಇದನ್ನೂ ಓದಿ: ಎಲ್ಲೇ ಹೋದರೂ ನಾನು ಕನ್ನಡತಿ: ಇದು ರಶ್ಮಿಕಾ ಮಂದಣ್ಣ ಮಾತು

ಈಗ ತಮಿಳಿನಲ್ಲಿಯೂ ಅವರು ನಟಿಸಲು ಸಜ್ಜಾಗಿದ್ದಾರೆ. ಈ ನಡುವೆಯೇ ರಶ್ಮಿಕಾ ತಮ್ಮ ಸಂಭಾವನೆಯ ಗ್ರಾಫ್‌ ಕೂಡ ಹೆಚ್ಚಿಸಿಕೊಂಡಿದ್ದಾರೆ ಎನ್ನುವುದು ಹೊಸ ಸುದ್ದಿ. ನಟರಾದ ಅಲ್ಲು ಅರ್ಜುನ್, ಮಹೇಶ್‌ ಬಾಬು, ಕಾರ್ತಿ, ನಿತಿನ್‌ ಜೊತೆಗೆ ರಶ್ಮಿಕಾ ನಟಿಸುವುದು ಖಾತ್ರಿಯಾಗಿದೆ. ಈ ನಟರು ನಟಿಸಿರುವ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಗಳಿಸುತ್ತಿರುವುದು ಗುಟ್ಟೇನಲ್ಲ.

ಒಂದು ಸಿನಿಮಾಕ್ಕೆ ₹ 40 ಲಕ್ಷ ಸಂಭಾವನೆ ಪಡೆಯುತ್ತಿದ್ದ ರಶ್ಮಿಕಾ ಈಗ ₹ 80 ಲಕ್ಷಕ್ಕೆ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. 

ಚಿತ್ರವೊಂದಕ್ಕೆ ತೆಲುಗಿನ ನಟಿಯರು ಪಡೆಯುವ ಸಂಭಾವನೆ 

ನಯನಾ ತಾರಾ:  ₹ 3 ಕೋಟಿಯಿಂದ ₹ 4 ಕೋಟಿ

ಅನುಷ್ಕಾ ಶೆಟ್ಟಿ:  ₹ 2 ಕೋಟಿಯಿಂದ ₹ 3 ಕೋಟಿ

ಕಾಜಲ್ ಅಗರ್‌ವಾಲ್‌:  ₹ 2 ಕೋಟಿ

ಸಮಂತಾ:  ₹ 2 ಕೋಟಿ

ತಮನ್ನಾ ಭಾಟಿಯಾ: ₹ 2 ಕೋಟಿ

ಕೀರ್ತಿ ಸುರೇಶ್‌:  ₹ 1 ಕೋಟಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 16

  Happy
 • 2

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !