ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್‌, ಡೇಟಿಂಗ್‌ ಆಸಕ್ತಿಯಿಲ್ಲ, ಮದುವೆ ಯೋಚನೆ ಇಲ್ಲವೇ ಇಲ್ಲ: ರಶ್ಮಿಕಾ ಮಂದಣ್ಣ

Last Updated 27 ಡಿಸೆಂಬರ್ 2019, 11:41 IST
ಅಕ್ಷರ ಗಾತ್ರ

ಈಗ ನಾನು ನಟಿಸುತ್ತಿರುವನಾಲ್ಕು ಬಹುನಿರೀಕ್ಷಿತ ಚಿತ್ರಗಳು ಹೊಸ ವರ್ಷದಲ್ಲಿ ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದೇನೆ ಎಂದು ರಶ್ಮಿಕಾ ಮಂದಣ್ಣ 2020ರಲ್ಲಿ ಕನಸುಗಳನ್ನು ಬಿಚ್ಚಿಟ್ಟರು.

ಸರಿಲೇರು ನೀಕೆವ್ವರು’, ‘ಭೀಷ್ಮ’, ‘ಪೊಗರು’, ‘ಸುಲ್ತಾನ್‌’ ಚಿತ್ರಗಳು ಬಿಡುಗಡೆಗೆ ಬಾಕಿ ಇವೆ.ಅಲ್ಲದೆ, ಸುಕುಮಾರ್‌ ಮತ್ತು ಅಲ್ಲು ಅರ್ಜುನ್‌ ಅವರ ಚಿತ್ರದಲ್ಲಿ ಹೊಸ ವರ್ಷದಲ್ಲಿ ನಟಿಸಲಿದ್ದೇನೆ. ಈಗ ನಾನು ಮಾಡುತ್ತಿರುವ ಕೆಲಸವನ್ನೇ ಇನ್ನಷ್ಟು ಚೆನ್ನಾಗಿ ಮಾಡುವುದು ಹೊಸ ವರ್ಷದ ನನ್ನ ಕನಸು ಮತ್ತು ಆಶಯ. ಅಲ್ಲದೆ, ಪ್ರತಿದಿನವನ್ನು ಸ್ಮರಣೀಯವಾಗಿಸಿಕೊಳ್ಳುವುದು ನನ್ನ ಸಂಕಲ್ಪ.

ಮದುವೆ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲ. ಸಿನಿಮಾ ವೃತ್ತಿ ಕಡೆಗೆ ಮಾತ್ರ ಗಮನ ಕೊಟ್ಟಿದ್ದೇನೆ.ಲವ್‌, ಡೇಟಿಂಗ್‌ ಕುರಿತು ಆಸಕ್ತಿ ಇಲ್ಲ. ಅದಕ್ಕೆ ನನ್ನ ಬಳಿಸಮಯವೂ ಇಲ್ಲ. ದಿನದ 24X7 ಅವಧಿಯೂ ಸಿನಿಮಾ ಬಗ್ಗೆ ಯೋಚಿಸುತ್ತೇನೆ.

ಭೀಷ್ಮ’ ಚಿತ್ರೀಕರಣ ಮುಗಿಸಿದ ನಂತರ ಇಟಲಿಯಲ್ಲಿರುವ ನನ್ನ ಸ್ನೇಹಿತೆಯ ಜತೆಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದೇನೆ.

ಬಾಲಿವುಡ್‌ ಚಿತ್ರಗಳಲ್ಲಿ ಅಭಿನಯಿಸಲು ಅವಕಾಶಗಳು ಬರುತ್ತಲೇ ಇವೆ. ಈ ಹಿಂದೆ ಒಂದು ಕಥೆ ಕೂಡ ಕೇಳಿದ್ದೆ. ಆದರೆ, ಡೇಟ್‌ ಹೊಂದಾಣಿಕೆಯಾಗದ ಕಾರಣಕ್ಕೆ ಅದನ್ನು ಒಪ್ಪಿಕೊಳ್ಳಲಿಲ್ಲ. ಈಗ ಒಪ್ಪಿಕೊಂಡಿರುವ ಸಿನಿಮಾಗಳು ಪೂರ್ಣಗೊಂಡ ನಂತರ ಬಾಲಿವುಡ್‌ನಲ್ಲಿಒಳ್ಳೆಯ ಬ್ಯಾನರ್‌ನಡಿ ಒಳ್ಳೆಯ ಕಂಟೆಂಟ್‌ ಇರುವ ಸ್ಕ್ರಿಪ್ಟ್‌ಗಳು ಬಂದರೆ ನಟಿಸಲು ನಿರ್ಧರಿಸಿವೆ.

ನನ್ನ ಯಶಸ್ಸಿನಲ್ಲಿ ಅಪ್ಪ –ಅಮ್ಮ ಖುಷಿಪಡುತ್ತಾರೆ. ನನಗೆ ಯಾವುದರಲ್ಲಿ ಖುಷಿ –ಸಂತೋಷ ಸಿಗುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ನನ್ನ ಸಿನಿಮಾ ಬದುಕು ಅವರು ಹೆಮ್ಮೆಪಡುವ, ಖುಷಿಪಡುವ ದಿಕ್ಕಿನಲ್ಲಿ ಸಾಗುತ್ತಿರುವುದರಿಂದ ನನ್ನನ್ನೂ ಖುಷಿಪಡಿಸಲು ಅಮ್ಮ ಒಂದು ಯೋಜನೆ ಹಾಕಿಕೊಂಡಿದ್ದಾರೆ. ಮಗಳು ಮನೆಗೆ ಬಂದಾಗ ಖುಷಿ ಖುಷಿಯಿಂದ ಬಿಡುವಿನ ಸಮಯ ಕಳೆಯಲೆಂದು ವಿರಾಜಪೇಟೆಯಲ್ಲಿ ನಮ್ಮ ಮನೆಯ ಬಳಿಯೇ ಪುಟ್ಟ ಫಾರ್ಮ್‌ಹೌಸ್‌ ಕಟ್ಟುವ ಡ್ರೀಮ್‌ ಪ್ರಾಜೆಕ್ಟ್‌ಗೆಕೈಹಾಕಿದ್ದಾರೆ. ನನಗೆ ಸಾಕುಪ್ರಾಣಿಗಳೆಂದರೆ ಇಷ್ಟ. ಆ ಫಾರ್ಮ್‌ಹೌಸ್‌ನಲ್ಲಿ ಏನಿಲ್ಲವೆಂದರೂ ಹತ್ತದಿನೈದು ನಾಯಿಗಳು, ಬೆಕ್ಕು, ಮೊಲದಂತಹ ಸಾಕುಪ್ರಾಣಿಗಳು ಇರಲಿವೆ ಎನ್ನುವುದು ನನ್ನ ನಿರೀಕ್ಷೆ. 2020ರಲ್ಲಿ ಡ್ರೀಮ್‌ ಫಾರ್ಮ್‌ಹೌಸ್‌ ಪೂರ್ಣವಾಗಲೆಂಬ ಹಾರೈಕೆ ನನ್ನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT