ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ ದೇವರಕೊಂಡ ವಿವಾಹವಾಗುತ್ತಿರುವುದಾಗಿ ಸ್ವತಃ ರಶ್ಮಿಕಾ ಅವರೇ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡು ಮಾಹಿತಿ ಬಹಿರಂಗಪಡಿಸಿದ್ದಾರೆ. ವರದಿಗಳ ಪ್ರಕಾರ, ಈ ಜೋಡಿ ಫೆಬ್ರುವರಿ 26ರಂದು ಹಸೆಮಣೆ ಏರಲಿದ್ದಾರೆ. ಆದರೆ ರಶ್ಮಿಕಾ ಅವರು ಅಧಿಕೃತವಾಗಿ ಮದುವೆ ದಿನಾಂಕ ತಿಳಿಸಿಲ್ಲ.

ವಿಜಯ್ ದೇವೆಕೊಂಡ ಹಾಗೂ ರಶ್ಮಿಕಾ ಜೋಡಿ ಈ ಹಿಂದೆ ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಹಾಗಾದರೆ ಈವರೆಗೆ ಈ ಜೋಡಿ ಒಟ್ಟಾಗಿ ನಟಿಸಿರುವ ಸಿನಿಮಾಗಳು ಯಾವುವು ಎಂಬುದನ್ನು ನೋಡೋಣ.

ಗೀತಾ ಗೋವಿಂದಂ (2018)

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಜೋಡಿಯ ಮೊದಲ ಸಿನಿಮಾ ‘ಗೀತಾ ಗೋವಿಂದಂ’ ಆಗಿದೆ. ತೆಲುಗಿನ ರೋಮ್ಯಾಂಟಿಕ್ ಹಾಸ್ಯ ಸಿನಿಮಾವಾದ ಗೀತಾ ಗೋವಿಂದಂ ಅನ್ನು ಪರಶುರಾಮ್ ನಿರ್ದೇಶಿಸಿದ್ದಾರೆ. ಈ ಸಿನಿಮಾ 2018 ಸಿನಿಮಾ ತೆರೆಕಂಡಿತ್ತು. ₹5ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾ ₹150 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಸಿನಿಮಾಗೆ ಅನಂತ ಶ್ರೀರಾಮ್ ಮತ್ತು ಶ್ರೀ ಮಣಿ ಸಂಗೀತ ನೀಡಿದ್ದಾರೆ.

ಡಿಯರ್ ಕಾಮ್ರಡ್ (2019)

ಇವರಿಬ್ಬರ ಜೋಡಿಯಲ್ಲಿ ಮೂಡಿಬಂದ ಎರಡನೇಯ ಸಿನಿಮಾ ಡಿಯರ್ ಕಾಮ್ರಡ್ . ತೆಲುಗಿನ ಆಕ್ಷನ್ ಸಿನಿಮಾ ಇದಾಗಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಬಿಗ್ ಬೆನ್ ಸಿನಿಮಾಸ್ ಒಟ್ಟಾಗಿ ನಿರ್ಮಿಸಿವೆ. ಭರತ್ ಕಮ್ಮಾ ನಿರ್ದೇಶಿಸಿದ್ದಾರೆ. ಈ ಚಿತ್ರ ₹37.33 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಸಿನಿಮಾ ಮೂಲಕ ಮಲಯಾಳಂನ ನಟಿ ಶ್ರುತಿ ರಾಮಚಂದ್ರನ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ರಣಬಾಲಿ

'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರಡ್'ನಲ್ಲಿ ವಿಜಯ್ ಜೊತೆ ರಶ್ಮಿಕಾ ನಟಿಸಿದ್ದರು. ಈಗ 'ರಣಬಾಲಿ'ಯಲ್ಲಿ ಮತ್ತೊಮ್ಮೆ ಈ ಜೋಡಿ ತೆರೆ ಮೇಲೆ ಕಾಣಸಿಕೊಳ್ಳಲಿದ್ದಾರೆ. ವಿಜಯ್ ಅವರ 14ನೇ ಸಿನಿಮಾ ಇದಾಗಿದ್ದು, ಸಿನಿಮಾಗೆ ರಾಹುಲ್ ಸಂಕ್ರಿತ್ಯಾನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ವರ್ಷ ಸೆಪ್ಟೆಂಬರ್ 11ರಂದು 'ರಣಬಾಲಿ' ಸಿನಿಮಾ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.