ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ನನಸಾದ ಸಂಭ್ರಮದಲ್ಲಿ ರಶ್ಮಿಕಾ

ಪ್ರಿನ್ಸ್‌ಗೆ ಜೋಡಿಯಾಗಿ ಕೊಡಗಿನ ಬೆಡಗಿ
Last Updated 9 ಜೂನ್ 2019, 19:30 IST
ಅಕ್ಷರ ಗಾತ್ರ

ಬಹುದಿನದ ಕನಸೊಂದು ನನಸಾಗುತ್ತಿರುವ ಕಾರಣಕ್ಕೆಸಂಭ್ರಮದಿಂದ ರೆಕ್ಕೆ ಬಿಚ್ಚಿ ನಲಿಯುತ್ತಿರುವ ಹಕ್ಕಿಯಂತಾಗಿದ್ದಾರಂತೆ ಬಹುಭಾಷೆ ತಾರೆ, ‘ಕನ್ನಡಿಗರ ಕ್ರಷ್‌’ ರಶ್ಮಿಕಾ ಮಂದಣ್ಣ. ಒಂದು ದೊಡ್ಡ ಗುರಿ ಮತ್ತು ಆಸೆ ಈಡೇರುತ್ತಿರುವುದಕ್ಕೆ ತುಂಬಾ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರಂತೆ ಕನ್ನಡದ ಈ ನಟಿ.

ಟಾಲಿವುಡ್‌ನ ಮೋಸ್ಟ್‌ ಸೆಲೆಬ್ರಿಟಿ ನಟ ‘ಪ್ರಿನ್ಸ್’ಮಹೇಶ್‌ ಬಾಬು ಜತೆಗೆ ತೆಲುಗು ಸಿನಿಮಾದಲ್ಲಿ ನಟಿಸುವ ಸಂಬಂಧ ಮಾತುಕತೆ ನಡೆಯುತ್ತಿರುವುದಾಗಿ ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ‘ಸಿನಿಮಾ ಪುರವಣಿ’ ನಡೆಸಿದ ವಿಶೇಷ ಸಂದರ್ಶನದಲ್ಲಿಸುಳಿವು ನೀಡಿದ್ದರು. ತಮ್ಮ 25ನೇ ಸಿನಿಮಾ ‘ಮಹರ್ಷಿ’ ಭಾರಿ ಸದ್ದು ಮಾಡಿ, ಬಾಕ್ಸಾಫೀಸಿನಲ್ಲಿ ಹಿಟ್‌ ಆದ ಬೆನ್ನಲ್ಲೇ‘ಪ್ರಿನ್ಸ್‌’ ತಮ್ಮ 26ನೇ ಸಿನಿಮಾ‘ಸರಿಲೆರು ನೀಕೆವ್ವರು’ ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾದಲ್ಲಿಮಹೇಶ್‌ ಬಾಬು ಜತೆಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ.ಇತ್ತೀಚೆಗಷ್ಟೇ ರಶ್ಮಿಕಾ ಟ್ವಿಟರ್‌ನಲ್ಲಿ ಮಹೇಶ್‌ ಬಾಬು ಜತೆಗೆ ನಟಿಸಲಿರುವ ಖುಷಿಯನ್ನು ಹಂಚಿಕೊಂಡಿದ್ದರು. ಈ ಚಿತ್ರದ ಮುಹೂರ್ತವೂ ನಡೆದಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾ 2020ರಲ್ಲಿ ಸಂಕ್ರಾಂತಿ ವೇಳೆಗೆ ತೆರೆಗೆ ಬರಲಿದೆಯಂತೆ.

ಇನ್ನೂ ‘ಸರಿಲೆರು ನೀಕೆವ್ವರು’ ಸಿನಿಮಾದ ಕಥೆ ಸೇನೆಗೆ ಸಂಬಂಧ ಪಟ್ಟಿದ್ದಂತೆ.ಈ ಸಿನಿಮಾದಲ್ಲಿ ಬಾಬು ಅವರದ್ದು ಸೇನಾಧಿಕಾರಿಯ ಪಾತ್ರವಂತೆ. ರಶ್ಮಿಕಾ ನಿಭಾಯಿಸಬೇಕಿದ್ದ ಪಾತ್ರದ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದಕ್ಕೆಆ ಪಾತ್ರದ ಸ್ವರೂಪವನ್ನೇಬದಲಿಸಲಾಗಿದೆ ಎನ್ನುವ ಮಾತು ಕೇಳಿಬಂದಿದೆ. ಇದರಲ್ಲಿ ರಶ್ಮಿಕಾ ಎಂತಹ ಪಾತ್ರ ನಿಭಾಯಿಸಲಿದ್ದಾರೆ ಎನ್ನುವ ಸುಳಿವನ್ನು ರಶ್ಮಿಕಾ ಆಗಲಿ ಅಥವಾ ಅವರ ಆಪ್ತರಾಗಲಿ ಬಿಟ್ಟುಕೊಡುತ್ತಿಲ್ಲ. ಆದರೆ, ಸೇನೆಗೆ ಸಂಬಂಧಿಸಿದ ಸಿನಿಮಾ ಆಗಿರುವುದರಿಂದ, ಯೋಧರ ಕುಟುಂಬದ ಹಿನ್ನೆಲೆ ಹೊಂದಿರುವ ರಶ್ಮಿಕಾ ತುಂಬಾ ಖುಷಿಯಿಂದಲೇ ಈ ಸಿನಿಮಾ ಒಪ್ಪಿಕೊಂಡಿದ್ದಾರಂತೆ.

ಅದರಲ್ಲೂ ‘ಪ್ರಿನ್ಸ್‌’ ಅವರ ಸಿನಿಮಾ ಅಂದ ಮೇಲೆ ಅದು ಅದ್ದೂರಿತನಕ್ಕೆ ಕೊರತೆ ಇರುವುದಿಲ್ಲ ಬಿಡಿ. ಅಂದ ಹಾಗೆ, ಈತೆಲುಗಿನ ಮತ್ತೊಬ್ಬ ಸ್ಟಾರ್‌ ನಟಿ ಸಾಯಿ ಪಲ್ಲವಿಯೂ ಈ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಚರ್ಚೆಯಲ್ಲಿತ್ತು. ಆದರೆ, ಡೇಟ್‌ ಸಮಸ್ಯೆಯಿಂದ ಸಾಯಿ ಪಲ್ಲವಿ ಈ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಹಾಗಾಗಿಯೇಆ ಅವಕಾಶ ರಶ್ಮಿಕಾಗೆ ಒಲಿದು ಬಂದಿದೆ. ಲೀಡ್‌ ರೋಲ್‌ ಕೊಟ್ಟಿರುವುದರಿಂದಲೇ ಕನ್ನಡದ ನಟಿ ರಶ್ಮಿಕಾ, ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುತ್ತವೆ ಅವರ ಆಪ್ತಮೂಲಗಳು.

ರಶ್ಮಿಕಾ ನಟಿಸಿರುವ ಸಾಕಷ್ಟು ಸಿನಿಮಾಗಳು ಈಗಾಗಲೇ ಹಿಟ್‌ ಆಗಿದ್ದರೂ ‘ಪ್ರಿನ್ಸ್‌’ನಂತಹ ದೊಡ್ಡ ನಟರೊಂದಿಗೆ ನಟಿಸಿರಲಿಲ್ಲ. ಈಗ ಮಹೇಶ್‌ ಬಾಬು ಜತೆಗೆ ನಟಿಸಲಿರುವುದರಿಂದ ರಶ್ಮಿಕಾ ತಾರಾ ವರ್ಚಸ್ಸು ಮತ್ತಷ್ಟು ಏರಲಿದೆ. ತಮಿಳಿನ ‘ಭೀಷ್ಮ’, ಕನ್ನಡದ ‘ಪೊಗರು’ ಸಿನಿಮಾಗಳ ಜತೆಜತೆಗೆ ದಿನಾಂಕ ಹೊಂದಿಸಿಕೊಂಡು ‘ಸರಿಲೆರು ನೀಕೆವ್ವರು’ ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರಂತೆ. ಈಗ ಸದ್ಯ ಅವರು, ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ‘ಡಿಯರ್‌ ಕಾಮ್ರೇಡ್‌’ ಸಿನಿಮಾದ ಡಬ್ಬಿಂಗ್‌ನಲ್ಲಿ ಹೈದರಾಬಾದ್‌ನಲ್ಲಿ ಬ್ಯುಸಿಯಾಗಿದ್ದಾರಂತೆ. ಅವರ ಕೈಯಲ್ಲಿ ಭರಪೂರ ಪ್ರಾಜೆಕ್ಟ್‌ಗಳಿದ್ದು, ಒಂದು ವರ್ಷದಲ್ಲಿ ಕನಿಷ್ಠ ಹತ್ತು ಸಿನಿಮಾಗಳನ್ನು ಮಾಡುವ ಯೋಜನೆ ಹೊಂದಿದ್ದಾರೆ ಎನ್ನುತ್ತವೆ ಅವರ ಆಪ್ತಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT