ಭಾನುವಾರ, ಜೂನ್ 26, 2022
21 °C

ವಿಡಿಯೊ: ತಮಗೆ ಸರಿಹೊಂದದ ಉಡುಗೆ ತೊಟ್ಟು ಮುಜುಗರ ಅನುಭವಿಸಿದರೇ ರಶ್ಮಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕನ್ನಡದ ಅತ್ಯಂತ ಸಕ್ಸಸ್‌ಫುಲ್ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ನಡೆದ ಬಾಲಿವುಡ್ ನಿರ್ದೆಶಕ ಕರಣ್ ಜೋಹರ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ತಮಗೆ ಸರಿಹೊಂದದ ಉಡುಗೆ ತೊಟ್ಟು ಮುಜುಗರ ಅನುಭವಿಸಿದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.

ಬುಧವಾರ ನಡೆದ ಕಾರ್ಯಕ್ರಮದಲ್ಲಿ ರಶ್ಮಿಕಾ, ಆಕರ್ಷಕ ಕಪ್ಪು ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಕ್ಯಾಮೆರಾ ಮುಂದೆ ಅವರು ತಮ್ಮ ಉಡುಗೆಯಿಂದ ಕೊಂಚ ಕಸಿವಿಸಿಗೆ ಒಳಗಾದಂತೆ ಕಂಡುಬಂತು. ಅಲ್ಲದೆ, ತಮ್ಮ ಉಡುಪನ್ನು ಸರಿ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದರು. ಈ ವಿಡಿಯೊವನ್ನು ಸೆಲೆಬ್ರಿಟಿ ಫೋಟೊಗ್ರಾಫರ್ ವಿರಲ್ ಬಯಾನಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಕೂಡಲೇ ವೈರಲ್ ಆಗುವ ಜೊತೆಗೆ ಟ್ರೋಲ್ ಸಹ ಆಗಿದೆ.

ಈ ವಿಡಿಯೊಗೆ ಕಾಮೆಂಟ್ ಮಾಡಿರುವ ಜಾಲತಾಣಿಗರು, ತಮಗೆ ಸರಿಹೊಂದದ ಉಡುಪನ್ನು ಅವರು ಧರಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ. ಆ ಉಡುಪು ನಿಜಕ್ಕೂ ಸರಿಹೊಂದುತ್ತಿಲ್ಲ. ಅದು ಅವರ ಹಾವಭಾವದಿಂದ ತಿಳಿಯುತ್ತಿದೆ ಎಂಬಿತ್ಯಾದಿ ಕಾಮೆಂಟ್ ಮಾಡಿದ್ದಾರೆ.
 
ಮುಂಬೈನ ಯಶ್ ರಾಜ್ ಸ್ಟುಡಿಯೊನಲ್ಲಿ ಕರಣ್ ಜೋಹರ್ ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡರು. ರಣಬೀರ್ ಕಪೂರ್, ಸಲ್ಮಾನ್ ಖಾನ್, ಕರೀನಾ ಕಪೂರ್, ವಿಜಯ್ ದೇವರಕೊಂಡ, ಹೃತಿಕ್ ರೋಶನ್ ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತನಾಮರು ಪಾರ್ಟಿಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು